ರಾಷ್ಟ್ರೀಯ

ಸೇನಾಪಡೆಗಳಿಗೆ ಯೋಗ ಕಡ್ಡಾಯಗೊಳಿಸಿದ ಕೇಂದ್ರ

Pinterest LinkedIn Tumblr

yogaನವದೆಹಲಿ: ತಮ್ಮ ದೈನಂದಿನ ವ್ಯಾಯಾಮದಲ್ಲಿ ಯೋಗವನ್ನು ಸೇರ್ಪಡೆಗೊಳಿಸುವಂತೆ 10 ಲಕ್ಷ ಅರೆಸೇನಾಪಡೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ದೇಶದ ಅರೆಸೇನಾ ಪಡೆ ಸೇರಿದಂತೆ ಅನೇಕ ಪೊಲೀಸ್ ದಳಗಳಿಗೆ ದಿನನಿತ್ಯದ ವ್ಯಾಯಾಮದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶಿಸಿದೆ.

ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ದಳ ಮತ್ತು ಬಟಾಲಿಯನ್ಸ್, ಗಡಿ ಭಾಗದ ಅಸ್ಸಾಂ ರೈಫಲ್ ಅಧಿಕಾರಿಗಳಿಗೆ ದೈನಂದಿನ ಚಟುವಟಿಕೆಯಲ್ಲಿ ದೈಹಿಕ ವ್ಯಾಯಾಮವು ಒಂದು ಭಾಗವಾಗಿದೆ. ಅಲ್ಲದೇ, ಯೋಗಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಈ ಎರಡನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಗವನ್ನು ಕೂಡ ಈ ದೈನಂದಿನ ಚಟುವಟಿಕೆಯ ಭಾಗವಾಗಬೇಕು ಎಂಬ ಆದೇಶವನ್ನು ಕೇಂದ್ರ ಹೊರಡಿಸಿದೆ.

ಈಗಾಗಲೇ ಆರು ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆಗಳಾದ ಕೇಂದ್ರ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ದಳ, ಶಸ್ತ್ರಾಸ್ತ್ರ ಸೀಮಾ ಬಲ್, ರಾಷ್ಟ್ರೀಯ ಭದ್ರತಾ ದಳ ಮತ್ತು ಅಸ್ಸಾಂ ರೈಫಲ್ ಪಡೆಗಳಿಗೆ ಯೋಗಾವನ್ನು ಕಡ್ಡಾಯವಾಗಿ ಮಾಡಬೇಕು ಆದೇಶ ಪತ್ರ ನೀಡಿದೆ.

ಯೋಗಾ ಭಾರತದ ಸಾಂಪ್ರಾದಾಯಿಕ ಕೊಡುಗೆ. ಇದನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಿದ್ದು, ಇದನ್ನು ಪ್ರತಿಯೊಬ್ಬ ನಾಗರಿಕನು ತಮ್ಮ ದೈನಂದಿನ ವ್ಯಾಯಾಮದಲ್ಲಿ ಅಳವಡಿಸಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಯೋಧನು ಇದನ್ನು ಕಡ್ಡಾಯವಾಗಿ ಮಾಡುವುದರ ಮೂಲಕ ಇತರ ನಾಗರಿಕರಿಗೆ ಮಾದರಿಯಾಗಿರಬೇಕು ಎಂದು ಆದೇಶ ಪತ್ರದಲ್ಲಿ ಬಿತ್ತರಿಸಲಾಗಿದೆ.

Write A Comment