ಮನೋರಂಜನೆ

ಅಬ್ಬಾ! ಅಮೀರ್ ಖಾನ್ ಗಂಟೆಗೆ ತಗೊಳ್ಳೋ ಸಂಭಾವನೆ ಎಷ್ಟು ಗೊತ್ತಾ ..?

Pinterest LinkedIn Tumblr

aಬಾಲಿವುಡ್‍ನ ಮಿಸ್ಟರ್ ಫರ್ಪೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಅಮೀರ್ ಖಾನ್ ಇದೀಗ ಮತ್ತೊಮ್ಮೆ ತಮ್ಮ ಸಂಭಾವನೆಯ ಮೂಲಕ ಸುದ್ದಿಯಾಗಿದ್ದು ಅವರು ಪ್ರತಿ ಗಂಟೆಗೆ ತೆಗೆದುಕೊಳ್ಳುವ ಮೊತ್ತ ಇದೀಗ ಅಚ್ಚರಿ ಮೂಡಿಸಿದೆ.

ಈ ಹಿಂದೆ ಸಾಮಾಜಿಕ ಮೌಲ್ಯಗಳನ್ನು ಹೊಂದಿರುವ ಜಾಹೀರಾತುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಅಮೀರ್ ಖಾನ್, ದಿನಬಳಕೆಯ ವಸ್ತುಗಳ ಬಗೆಗಿನ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಜಾಹಿರಾತಿಗೆ ಪ್ರತಿ ಗಂಟೆಗೆ 2 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದು ಇದಕ್ಕೆ ಜಾಹಿರಾತು ನೀಡುವ ಕಂಪನಿಯೂ ಒಪ್ಪಿಗೆ ಸೂಚಿಸಿದೆಯಂತೆ.

ಅಲ್ಲದೇ ಈ ಜಾಹೀರಾತಿನಲ್ಲಿ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ಇಬ್ಬರೂ ಕಾಣಿಸಿಕೊಳ್ಳಲಿದ್ದು, ಈ ಜೋಡಿ ಪಾತ್ರಕ್ಕೆ ಗಂಟೆಗೆ 2 ಕೋಟಿ ಬೇಡಿಕೆ ಇಡುವ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ಶಾರೂಖ್- ಗೌರಿ ಖಾನ್, ಅಭಿಷೇಕ್- ಐಶ್ವರ್ಯ, ಸೈಫ್ ಹಾಗೂ ಕರೀನಾ ಜೋಡಿಗಳ ಜತೆ ಸೇರ್ಪಡೆಯಾಗಿದ್ದಾರೆ.

Write A Comment