ಪಶ್ಚಿಮ ಬಂಗಾಳ: ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂದಲೆಳೆಯ ಅಂತರದಲ್ಲಿ ಆಪಾಯದಿಂದ ಪಾರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ನಿತಿನ್ ಗಡ್ಕರಿಯವರಿದ್ದ ಹೆಲಿಕಾಪ್ಟರ್ ಹಲ್ದಿಯಾ ಜಿಲ್ಲೆಯ ಹೆಲಿಪ್ಯಾಡ್ ನಲ್ಲಿ ಇಳಿಯುತ್ತಿದ್ದ ವೇಳೆ ನೆಲಕ್ಕೆ ಹಾಸಿದ್ದ ಟಾರ್ಪಲಿನ್ ಹಾಗೂ ಕೆಂಪು ಹಾಸು ಗಾಳಿಗೆ ಹಾರಿದೆ. ಇದು ಒಂದು ವೇಳೆ ತಿರುಗುತ್ತಿದ್ದ ಹೆಲಿಕಾಪ್ಟರ್ ರೆಕ್ಕೆಗೆ ಸಿಲುಕಿಕೊಂಡಿದ್ದರೆ ಭಾರೀ ಆನಾಹುತ ಸಂಭವಿಸುತ್ತಿತ್ತೆಂದು ಹೇಳಲಾಗಿದೆ.
ಪುಣ್ಯವಶಾತ್ ಟಾರ್ಪಲಿನ್ ಹಾಗೂ ಕೆಂಪು ಹಾಸು ಹೆಲಿಕಾಪ್ಟರ್ ರೆಕ್ಕೆಗಳ ಗಾಳಿಯ ಕಾರಣಕ್ಕಾಗಿ ಪಕ್ಕಕ್ಕೆ ಹಾರಿದ್ದು ಯಾವುದೇ ಹಾನಿ ಸಂಭವಿಸಿಲ್ಲ.
