ಮನೋರಂಜನೆ

ಜುಲೈ 1ಕ್ಕೆ ಸೆಟ್ಟೇರಲಿದೆ ಪೂರಿ ಜಗನ್ನಾಥ್ ನಿರ್ದೇಶನದ ‘ಲೋಫರ್’

Pinterest LinkedIn Tumblr

Director-Puri-Jagannadh

ಹೈದರಾಬಾದ್: ಪೂರಿ ಜಗನ್ನಾಥ್‍ ನಿರ್ದೇಶನದ ಯಶಸ್ವಿ ಚಿತ್ರಗಳಾದ ಪೋಕಿರಿ, ಇಡಿಯಟ್, ಟೆಂಪರ್ ಲಿಸ್ಟ್ ಗೆ ಇದೀಗ ಲೋಫರ್ ಚಿತ್ರ ಕೂಡ ಸೇರ್ಪಡೆಗೊಳ್ಳಲಿದ್ದು, ಜುಲೈ 1ಕ್ಕೆ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಈಗಾಗಲೇ ಟೆಂಪರ್ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ನಿರ್ದೇಶಕ ಪೂರಿ ಜಗನ್ನಾಥ್‍ ಇದೀಗ ನಟ ವರುಣ್ ಅಭಿನಯದ ಲೋಫರ್ ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಲಿದ್ದು, ಜುಲೈ 1 ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ಲೋಫರ್ ಚಿತ್ರವೊಂದು ಕಮರ್ಷಿಯಲ್ ಸಿನಿಮಾವಾಗಿದ್ದು, ಸೆಂಟಿಮೆಂಟ್ ಹಾಗೂ ಆ್ಯಕ್ಷನ್ ಎರಡನ್ನೂ ಸೇರಿದ ಚಿತ್ರವಾಗಿದೆ, ನಟ ವರುಣ್ ಅಭಿನಯಿಸಲಿರುವ ಮೊದಲ ಸಾಹಸಮಯ ಚಿತ್ರವಾಗಿದೆ ಎಂದು ಚಿತ್ರ ನಿರ್ಮಾಪಕ ಸಿ.ಕಲ್ಯಾಣ್ ಹೇಳಿದ್ದಾರೆ.

ಚಿತ್ರದ ಚಿತ್ರೀಕರಣಕ್ಕಾಗಿ ಈಗಾಗಲೇ ಚಿತ್ರದ ತಂಡ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜೋದ್ಪುರ ಹಾಗೂ ರಾಜಸ್ತಾನದಲ್ಲಿ ಚಿತ್ರೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಜುಲೈ 1 ರಿಂದ ಪ್ರಾರಂಭವಾಗುವು ಚಿತ್ರದ ಚಿತ್ರೀಕರಣವು ಸೆಪ್ಟಂಬರ್ ಅಂತಿಮದ ವೇಳೆಗೆ ಮುಕ್ತಾಯವಾಗಲಿದೆ. ದಸರಾ ಹಬ್ಬದಂದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ,

Write A Comment