ಮನೋರಂಜನೆ

ಜೈಲಲ್ಲಿರುವ ಸಂಜು ಬಾಬನ ಕೈಲಿದೆ 3 ಚಿತ್ರ !!!

Pinterest LinkedIn Tumblr

dgfsdgsd

1993 ರ ಮುಂಬೈ ಬಾಂಬ್ ಸ್ಪೋಟ ಪ್ರಕರಣದ ಆರೋಪದಲ್ಲಿ ಬಂಧಿತರಾಗಿರುವ ಸಂಜಯ್ ದತ್’ಗಾಗಿ ಬಾಲಿವುಡ್ ನಿರ್ದೇಶಕರು ಕ್ಯೂನಲ್ಲಿ ನಿಂತಿರುವುದನ್ನು ಗಮನಿಸಿದರೆ ಜೈಲಿಗೆ ಹೋದರೂ ಸಂಜು ಬಾಬನ ಇಮೇಜ್’ಗೆ ಧಕ್ಕೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಪೆರೋಲ್’ನಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ಪಿಕೆ ಚಿತ್ರದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದ ಸಂಜು ಭಾಯ್’ಗೆ ಆಕ್ಷನ್ ಕಟ್ ಹೇಳಲು ಬಾಲಿವುಡ್’ನ ಮೂವರು ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ.

ರಾಜ್ ಕುಮಾರ್ ಹಿರಾನಿ ಹೊಸ ಚಿತ್ರದಲ್ಲಿ ಸಂಜಯ್ ದತ್?
ಮುನ್ನಾ ಭಾಯ್ ಚಿತ್ರಗಳಲ್ಲಿ ಸಂಜಯ್ ದತ್’ರಿಂದ ವಿಶಿಷ್ಟ ಪಾತ್ರಗಳನ್ನು ಮಾಡಿಸಿದ್ದ ಆಪ್ತ ಗೆಳೆಯ ಪಿಕೆ ನಿರ್ದೇಶಕ ರಾಜ್ ಕುಮಾರ್ ಹಿರಾನಿಯು ಮುನ್ನಾಭಾಯ್ ಸಿರೀಸ್’ನ 3ನೇ ಭಾಗ ತಯಾರಿಸುವ ಇರಾದೆಯಲ್ಲಿದ್ದು ಸಂಜು ಬಿಡುಗಡೆಗೆ ಕಾಯುತ್ತಿದ್ದಾರೆ ಎಂದು ಬಾಲಿವುಡ್’ನ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹಾಗೆಯೇ ರಣಬೀರ್ ನಾಯಕನಾಗಿ ಸಂಜಯ್ ದತ್ ಜೀವನಕಥೆಯಾಧಾರಿತ ಚಿತ್ರವನ್ನು ರಾಜ್ ಕುಮಾರ್ ಹಿರಾನಿ ನಿರ್ದೇಶಿಸಲಿದ್ದಾರೆ.

ಸಂಜು ಬಾಬಗೆ ಸಂಜಯ್ ಗುಪ್ತ ಆಕ್ಷನ್ ಕಟ್?
ಸಂಜಯ್ ದತ್ ಅಭಿನಯದ ಹಿಟ್ ಚಿತ್ರಗಳ ನಿರ್ದೇಶಕರೆಂದೇ ಖ್ಯಾತರಾಗಿರುವ ಸಂಜಯ್ ಗುಪ್ತ ಸದ್ಯ ಐಶ್ವರ್ಯಾ ರೈ ಅಭಿನಯನದ ಜಝ್ಬಾ ಚಿತ್ರದ ನಂತರ ನಿರ್ದೇಶಿಸಲು ಸಂಜಯ್ ದತ್’ಗಾಗಿ ಕಥೆ ರೆಡಿ ಮಾಡಿದ್ದಾರೆ.

ಅಲ್ಲದೆ ಈ ಚಿತ್ರವನ್ನು ಸಂಜಯ್ ದತ್ ನಿರ್ಮಿಸಲಿದ್ದಾರೆ ಎಂಬ ಸುದ್ದಿಯು ಕೂಡ ಹೊರಬಿದ್ದಿದೆ. ಈ ಹಿಂದೆ ಸಂಜಯ್ ದತ್-ಸಂಜಯ್ ಗುಪ್ತ ಜೋಡಿಯು ಕಾಂಟೆ,ಪ್ಲಾನ್, ಮುಸಾಫಿರ್,ಜಿಂದಾ ಮತ್ತು ಶೂಟ್ ಔಟ್ ಅಟ್ ಲೋಖಂಡ್ವಾಲ ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.

ಓ ಮೈ ಗಾಡ್’ನ ಕೈಕೆಳಗೆ ಮುನ್ನಾ ಭಾಯ್…
ಬಾಲಿವುಡ್’ನಲ್ಲಿ ಸಂಚಲನ ಸೃಷ್ಠಿಸಿದ್ದ ಓ ಮೈ ಗಾಡ್ ಚಿತ್ರದ ನಿರ್ದೇಶಕ ಉಮೇಶ್ ಶುಕ್ಲ ಕಳೆದ ಬಾರಿ ಪೆರೋಲ್’ನಲ್ಲಿ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಸಂಜು ಭಾಯ್’ಯನ್ನು ಭೇಟಿಯಾಗಿ ಕಥೆ ಒಪ್ಪಿಸಿದ್ದಾರೆ. ನಿರ್ದೇಶಕ ಉಮೇಶ್ ಶುಕ್ಲ ಸದ್ಯ ಅಮಿತಾಭ್ ಬಚ್ಚನ್’ರ 102 ನಾಟೌಟ್ ಚಿತ್ರದ ತಯಾರಿಯಲ್ಲಿದ್ದು ಈ ಚಿತ್ರದ ನಂತರ ಸಂಜು ಬಾಬನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸಂಜಯ್ ದತ್’ಗಾಗಿ ತಯಾರು ಮಾಡಿದ ಚಿತ್ರಕಥೆಯಿಂದ ಭಾಯ್ ಇಂಪ್ರೆಸ್ ಆಗಿದ್ದು ಅವರ ಬಿಡುಗಡೆಯನ್ನು ಎದುರು ನೋಡುತ್ತಿರುವುದಾಗಿ ನಿರ್ದೇಶಕ ಉಮೇಶ್ ಶುಕ್ಲ ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ ಸಂಜಯ್ ದತ್’ಗೆ ಕರಣ್ ಜೋಹರ್ ನಿರ್ಮಾಣದ ಶುದ್ದಿ ಚಿತ್ರದಲ್ಲಿ ನೆಗೆಟಿವ್ ಪಾತ್ರವಿತ್ತು. ಆದರೆ ಚಿತ್ರದಿಂದ ಸಂಜು ಗೆಳೆಯ ಸಲ್ಮಾನ್ ಖಾನ್ ಹಿಂದೆ ಸರಿದ ಬೆನ್ನಲ್ಲೇ ಸಂಜಯ್ ದತ್ ಕೂಡ ನೆಗೆಟಿವ್ ರೋಲ್ ನೋ ಅಂದಿದ್ದಾರೆ. ಜೈಲಲಿದ್ದೆ 3 ಚಿತ್ರಗಳಿಗೆ ನಾಯಕನಾಗಿರುವ ಸಂಜುಬಾಬನ ಸೆರೆವಾಸದ ನಂತರ ನಿರ್ಮಾಪಕರು ಕಾಲ್’ಶೀಟ್’ಗಾಗಿ ಮನೆಮುಂದೆ ಸಾಲುಗಟ್ಟಿ ನಿಂತ್ರು ಅಚ್ಚರಿಯಿಲ್ಲ ಬಿಡಿ.

ಐದು ವರ್ಷಗಳ ಜೈಲುವಾಸವನ್ನು ಪೂರೈಸಿ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಡಿಸೆಂಬರ್’ನಲ್ಲಿ ಬಿಡುಗಡೆಯಾಗಲಿದ್ದಾರೆ. ಅನಂತರ ಚಿತ್ರೋದ್ಯಮದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಇಚ್ಛಿಸಿದಾರೆಂದು ವರದಿಯಾಗಿದೆ. ಆದರೆ ಸಂಜು ಮಾತ್ರ ಮತ್ತೊಮ್ಮೆ ಮೈಕಟ್ಟನ್ನೆಲ್ಲಾ ಹುರಿಗೊಳಿಸಿ ಮುಂದಿನ ವರ್ಷಾಂತ್ಯಕ್ಕೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಸಂಜು ಭಾಯ್’ಯ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment