ಕರ್ನಾಟಕ

ಟೆಂಪೊ ಟ್ರಾವಲರ್ ಮೇಲೆ ಮರ ಬಿದ್ದು ಮೂವರ ಸಾವು

Pinterest LinkedIn Tumblr

koda

ಮಡಿಕೇರಿ: ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನಲ್ಲಿ ಟೆಂಪೊ ಟ್ರಾವಲರ್ ಮೇಲೆ ಮರ ಬಿದ್ದು ಮೂವರು ಮೃತಪಟ್ಟಿದ್ದಾರೆ.  ಮಡಿಕೇರಿ ತಾಲೂಕಿನ ಬೋಯಿಕೆರಿ ಗ್ರಾಮದ ಬಳಿಕ ಚಲಿಸುತ್ತಿದ್ದ ಟೆಂಪೊ ಮೇಲೆ ಮರ ಬಿದ್ದಿದೆ.

ಕಳೆದ ಮೂರು ದಿನಗಳಲ್ಲಿ ಕೊಡಗು ಪ್ರದೇಶದಲ್ಲಿ ಭಾರೀ ಗಾಳಿ, ಮಳೆಯಾಗುತ್ತಿದ್ದು,  ಮಳೆಯಿಂದಾಗಿ ಮರವು ಬೀಳುತ್ತಿದ್ದಾಗಲೇ ಟೆಂಪೊ ಟ್ರಾವಲರ್ ಅದರ ಕೆಳಕ್ಕೆ ಸಿಕ್ಕಿ ನಜ್ಜುಗುಜ್ಜಾಗಿದ್ದು, ಅದರಲ್ಲಿ  ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರು.

ಟೆಂಪೊ ಟ್ರಾವಲರ್ ಒಳಗೆ ಸಿಕ್ಕಿದ ಐವರನ್ನು ರಕ್ಷಣೆಮಾಡಲಾಗಿದ್ದು, ಐವರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

Write A Comment