ಮನೋರಂಜನೆ

ಕತ್ರಿನಾ ಕೈಫ್‌‌ಳೊಂದಿಗೆ ಜಾಹೀರಾತಿನಲ್ಲಿ ನಟಿಸಲು 7 ಕೋಟಿ ಆಫರ್ ತಿರಸ್ಕರಿಸಿದ ಸಲ್ಮಾನ್ ಖಾನ್

Pinterest LinkedIn Tumblr

sallu

ಮುಂಬೈ:  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಹಾಟ್ ಹಾಟ್ ನಟಿ ಕತ್ರಿನಾ ಕೈಫ್ ಮಧ್ಯದ ಬಿರುಕು ಮತ್ತಷ್ಟು ಹೆಚ್ಚಾದಂತೆ ಕಾಣುತ್ತದೆ.ಕತ್ರಿನಾ ಜೊತೆ ಜಾಹೀರಾತಿನಲ್ಲಿ ನಟಿಸಲು ಸಲ್ಮಾನ್ ಖಾನ್ 7 ಕೋಟಿ ಆಫರ್ ತಿರಸ್ಕರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆದರೆ, ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಕತ್ರಿನಾ ಸದಾ ನನ್ನ ಗೆಳತಿಯಾಗಿರುತ್ತಾಳೆ ಮತ್ತು ಖಾನ್ ಕುಟುಂಬದ ಹಿತೈಷಿಯಾಗಿರುತ್ತಾಳೆ ಎಂದು ಹೇಳಿಕೆ ನೀಡಿದ್ದರು.

ಆದರೆ, ಇತ್ತೀಚಿನ ವರದಿಗಳು ಭಿನ್ನವಾಗಿವೆ. ಸಲ್ಮಾನ್ ಮತ್ತು ಕತ್ರಿನಾಳನ್ನು ಹಾಕಿಕೊಂಡು ಜಾಹೀರಾತಿನಲ್ಲಿ ನಟಿಸಲು ಕಂಪೆನಿಯೊಂದು 7 ಕೋಟಿ ರೂಪಾಯಿಗಳ ಆಫರ್ ನೀಡಿತ್ತಂತೆ. ಸಲ್ಮಾನ್‌‍ರೊಂದಿಗೆ ನಟಿಸಲು ಕತ್ರಿನಾ ಆಸಕ್ತಿ ತೋರಿದರೂ ಸಲ್ಮಾನ್ ಖಾನ್ ನೋ ಅಂದರಂತೆ.

ಕತ್ರಿನಾಳೊಂದಿಗೆ ನಟಿಸುವ ಅವಕಾಶ ಕೈ ಬಿಟ್ಟಿರುವ ಹಿಂದೆ ಹೊರಜಗತ್ತಿಗೆ ಗೋಚರಿಸದಿರುವ ಇಬ್ಬರ ನಡುವಿನ ಅಂತರಿಕ ಭಿನ್ನಮತ ಉಲ್ಬಣವಾಗಿರಬಹುದು ಎಂದು ಬಾಲಿವುಡ್ ಪಂಡಿತರ ಲೆಕ್ಕಾಚಾರವಾಗಿದೆ.

ಮೆಹಬೂಬ್ ಸ್ಟುಡಿಯೋದಲ್ಲಿ ಮಾತನಾಡಿದ ಸಲ್ಮಾನ್ ಖಾನ್, ಒಂದು ಕಾಲದಲ್ಲಿ ಕತ್ರಿನಾ ನನ್ನ ಗೆಳತಿಯಾಗಿದ್ದಳು. ಇವತ್ತು ಬೇರೆಯವರ ಗೆಳತಿಯಾಗಿದ್ದಾಳೆ. ಆಕೆಯನ್ನು ನಾನು ಗೌರವಿಸುವುದರಿಂದ ತುಂಬಾ ದೂರವಾಗಿದ್ದೇನೆ. ಮತ್ತೆ ನಾವು ಜೊತೆಯಾಗುವುದರಿಂದ ಗಾಸಿಪ್‌ಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಮನದಾಳವನ್ನು ಬಿಚ್ಚಿಟ್ಟಿದ್ದಾನೆ.

Write A Comment