ರಾಷ್ಟ್ರೀಯ

ಯೋಗಾ ಡೇ: ಬಿಜೆಪಿಯಿಂದ ಕೋಮುವಾದದ ಡರ್ಟಿ ಗೇಮ್ ಎಂದ ಮಾಯಾವತಿ

Pinterest LinkedIn Tumblr

maya

ಲಕ್ನೋ: ಮುಂಬರುವ ಜೂನ್ 21 ರಂದು ಯೋಗಾ ಡೇ ಆಚರಿಸುವುದನ್ನು ಸ್ವಾಗತಿಸಿದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಆದರೆ ಬಿಜೆಪಿ ಇದಕ್ಕೊಂದು ಕೋಮವಾದ ಬಣ್ಣದ ಲೇಪನ ಮಾಡುತ್ತಿರುವುದ ಸರಿಯಲ್ಲ ಎಂದು ಟೀಕಿಸಿದ್ದಾರೆ.

ಜೂನ್ 21 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ನಮ್ಮ ಪಕ್ಷದ ವಿರೋಧವಿಲ್ಲ. ನಾವು ಸ್ವಾಗತಿಸುತ್ತೇವೆ. ಆದರೆ, ಇಂತಹ ಸಂದರ್ಭದಲ್ಲಿ ಬಿಜೆಪಿ ಕೀಳುಮಟ್ಟದ ಕೋಮುವಾದದ ಆಟವಾಡುತ್ತಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಮರೆತು ಹೊಸದಾದ ವಿವಾದಾತ್ಮಕ ಸಂಪ್ರದಾಯಗಳನ್ನು ಆರಂಭಿಸುತ್ತಿದೆ. ಇದು ಸರಕಾರದ ಮಾನಸಿಕ ಅಸ್ವಸ್ಥತೆಯನ್ನು ತೋರುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಗಣಿಸಿದ ವಿಶ್ವಸಂಸ್ಥೆ ಜೂನ್ 21 ಅಂತಾರಾಷ್ಟೀಯ ಯೋಗ ದಿನಾಚರಣೆ ಎಂದು ಘೋಷಿಸಿದೆ.

Write A Comment