ಕರ್ನಾಟಕ

‘ಯುವರತ್ನ’ ಪುನೀತ್ ಟೀಂ ಜೊತೆ ಮಂತ್ರಾಲಯಕ್ಕೆ ತೆರಳಿದ ಜಗ್ಗೇಶ್..!

Pinterest LinkedIn Tumblr

ಬೆಂಗಳೂರು: ಕೊರೋನಾ ಭೀತಿ ನಡುವೆ ಚಿತ್ರಮಂದಿರಗಳಲ್ಲಿ ಏಪ್ರಿಲ್​ 7ರವರೆಗೆ ಶೇಕಡ 100ರಷ್ಟು ಆಸನ ವ್ಯವಸ್ಥೆಗೆ ಸರ್ಕಾರ ಅಸ್ತು ಎಂದ ಬೆನ್ನಲ್ಲೆ ‘ಯುವರತ್ನ’ ಚಿತ್ರತಂಡ ನಿಟ್ಟುಸಿರುಬಿಟ್ಟಿದೆ.

ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನೆಮಾ ಬಿಡುಗಡೆಯಾದ ಒಂದೇ ದಿನಕ್ಕೆ ಸರ್ಕಾರ 50% ಅಕ್ಯುಪೆನ್ಸಿ ನಿಯಮ ಮಾಡಿತ್ತು. ಆದರೆ ಸ್ಯಾಂಡಲ್ ವುಡ್ ಸರ್ವರ ಹೋರಾಟದ ಫಲವಾಗಿ ಹಾಗೂ ಚಿತ್ರತಂಡದ ಒಕ್ಕೋರಲ ಮನವಿಗೆ ಸರಕಾರ ಸ್ಪಂದಿಸಿತ್ತು.

ಸದ್ಯ ‘ಯುವರತ್ನ’ ಚಿತ್ರತಂಡದ ಮೂವರು ಮಂತ್ರಾಲಯದ ರಾಯರ ದರ್ಶನಕ್ಕೆ ತೆರಳಿದ್ದಾರೆ. ಇಂದು ಬೆಳಗ್ಗೆ ನಟ ಪುನೀತ್​ ರಾಜ್​ಕುಮಾರ್​, ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಹಾಗೂ ಹೊಂಬಾಳೆ ಫಿಲಂಸ್​​ ಕಾರ್ಯಾಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಮಂತ್ರಾಲಯದತ್ತ ಪ್ರಯಾಣ ಬೆಳೆಸಿದ್ದಾರೆ.

ಅಲ್ಲದೆ ನವರಸನಾಯಕ ಜಗ್ಗೇಶ್​ ಕೂಡ ಬೃಂದಾವನದ ದರ್ಶನಕ್ಕೆ ಪುನೀತ್​ಗೆ ಸಾಥ್​ ನೀಡಿದ್ದಾರೆ. ಹೌದು.. ಚಿತ್ರಮಂದಿರಗಳಿಗೆ ಹೇರಲಾಗಿದ್ದ ರೂಲ್ಸ್ ವಿಚಾರವಾಗಿ ‘ಯುವರತ್ನ’ ಸಿನಿಮಾದ ಜೊತೆ ನಿಂತಿದ್ದ ಜಗ್ಗೇಶ್​, ಇದೀಗ ‘ಯುವರತ್ನ’ ತಂಡದ ಜೊತೆ ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದ್ದು ಪುನೀತ್ ಜೊತೆ ಹೊರಟಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಮಂತ್ರಾಲಯ ರಾಯರ ಬೃಂದಾವನದ ದರ್ಶನಕ್ಕೆ ಸಹೋದರ ಪುನೀತ, ಸಂತೋಷ ಆನಂದರಾಮ, ಕಾರ್ತಿಕ್ ಜೊತೆ ಹೊರಟೆ.. ಶುಭದಿನ ಶುಭೋದಯ’ ಅಂತ ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

Comments are closed.