ಕರ್ನಾಟಕ

ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದು 28 ದಿನಗಳ ನಂತರ ಚಾಮರಾಜಾನಗರ ಜಿಲ್ಲಾಧಿಕಾರಿಗೆ ಕೊರೋನಾ

Pinterest LinkedIn Tumblr

ಮೈಸೂರು: ಕೋವಿಡ್ ಬಗೆಗಿನ ಸಾರ್ವಜನಿಕರಲ್ಲಿರುವ ಗೊಂದಲಗಳ ನಡುವೆ ನಡೆದ ಮತ್ತೊಂದು ಬೆಳವಣಿಗೆಯಲ್ಲಿ ಕೊರೋನಾಗಾಗಿನ ಲಸಿಕೆಯ ಎರಡನೇ ಡೋಸ್ ಪಡೆದು 28 ದಿನಗಳ ನಂತರ, ಚಾಮರಾಜಾನಗರ ಜಿಲ್ಲಾಧಿಕಾರಿ ಎಂ.ಆರ್.ರವಿಯವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಚಾಮರಾಜಾನಗರ ಜಿಲ್ಲಾ ಡಿಎಚ್‌ಒ ಎಂಸಿ ರವಿ ಅವರ ಪ್ರಕಾರ, ಜಿಲ್ಲಾಧಿಕಾರಿ ರವಿಯವರಿಗೆ ಶನಿವಾರ ಕೊರೋನಾದ ಲಕ್ಷಣಗಳು ಕಾಣಿಸಿದೆ. ಬಳಿಕ ಸ್ವತಃ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಆ ವರದಿಯು ಭಾನುವಾರ ಬಂದಿದ್ದು ಅದರಲ್ಲಿ ಕೊರೋನಾ ಸೋಂಕು ದೃಢವಾಗಿದೆ.

ಡಿಸಿ ಫೆಬ್ರವರಿ 9ರಂದು ಕೋವಿಶೀಲ್ಡ್ ಲಸಿಕೆಯನ್ನು ತೆಗೆದುಕೊಂಡಿದ್ದು ಮಾರ್ಚ್ 8ರಂದು ಎರಡನೇ ಡೋಸ್ ಸಹ ತೆಗೆದುಕೊಂಡಿದ್ದಾರೆ.ಈಗ ಲಸಿಕೆ ತೆಗೆದುಕೊಂಡ 27 ದಿನಗಳ ನಂತರ ಅವರು ಕೊರೋನಾ ಪಾಸಿಟಿವ್ ವರದಿ ಪಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಡಿಎಚ್‌ಒ ವ್ಯಾಕ್ಸಿನೇಷನ್ ನಂತರ ಅದು ದೇಹದಲ್ಲಿ ತನ್ನ ಕೆಲಸ ಪ್ರಾರಂಭಿಸಲು ಒಂದು ತಿಂಗಳ ಕಾಲ ತೆಗೆದುಕೊಳ್ಲಲಿದೆ.ಜಿಲ್ಲಾಧಿಕಾರಿಗಳು ಇದೀಗ ಹೋಂ ಐಸೋಲೇಷನ್ ನಲ್ಲಿದ್ದಾರೆ ಎಂದಿದ್ದಾರೆ.

Comments are closed.