ಕರಾವಳಿ

ಬಂಟರ ಸಂಘ ಮುಂಬಯಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಉಚಿತ ಕೋವಿಡ್ ಲಸಿಕೆ ಶಿಭಿರ

Pinterest LinkedIn Tumblr

ಮುಂಬಯಿ : ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಸಮಾಜ ಬಾಂಧವರಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಶಿಭಿರವು ಎ. 3 ರಂದು ಮೀರಾರೋಡ್ ತುಂಗಾ ಆಸ್ಪತ್ರೆಯಲ್ಲಿ ನಡೆಯಿತು.

ಕೊರೋನ ಮಹಾಮಾರಿಯ ರೋಗದ ಬಗ್ಗೆ ತುಂಗಾ ಹಾಸ್ಪಿಟಲಿನ ಆಡಳಿತ ನಿರ್ದೇಶಕ ಡಾ. ಸತೀಷ್ ಶೆಟ್ಟಿಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನಾವು ಆರೋಗ್ಯವಂತರಾಗಿರಲು ನಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕಾಗಿದೆ. ಮನೆಯಲ್ಲಿ ಹಾಗೂ ಪರಿಸರದಲ್ಲಿ ಸುಚಿತ್ವವನ್ನು ಕಾಪಾಡಬೇಕು ಆಗ ಮಾತ್ರ ಭೀಕರ ಕಾಯಿಲೆಯಿಂದ ದೂರವಿರಲು ಸಾಧ್ಯ. ಯಾವುದೇ ಸಂದರ್ಭದಲ್ಲಿ ಕೂಡ ನಮ್ಮನ್ನು ಕೊರೋನಾ ಆವರಿಸಿ ಕೊಳ್ಳಬಹುದು.

ಒಮ್ಮೆ ಬಂದ ರೋಗ ಮತ್ತೆ ಬರುವುದಿಲ್ಲ ಎನ್ನುವುದು ಅಸಾಧ್ಯ ಈ ಭಯಾನಕ ರೋಗ ಸುಮಾರು ನಾಲ್ಕು ವರ್ಷಗಳ ಕಾಲ ಇರಬಹುದು ಎಂದು ನನ್ನ ಅಭಿಪ್ರಾಯ .ನಮ್ಮ ಜೀವ ರಕ್ಷಿಸುವ ಮೂಲಕ ಇತರರ ಜೀವವನ್ನು ಕೂಡ ರಕ್ಷಿಸಬಹುದು . ಕೋರೋನಾ ದ ಬಗ್ಗೆ ನಿರ್ಲಕ್ಷ ಸಲ್ಲದು . ಧೈರ್ಯ ಮತ್ತು ತಹಜ ಆಹಾರವನ್ನು ಸೇವಿಸಿ . ಶರೀರದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಹುಟ್ಟಿಕೊಂಡರೆ ಅದಕ್ಕೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಔಷಧಿಯನ್ನು ಪಡೆಯಬೇಕು..‌‌ ಹೀಗೆ ಕೊರೊನಾ ರೋಗದ ಬಗ್ಗೆ ಮಾಹಿತಿಯನ್ನು ನೀಡಿದರು.

ಪ್ರಾದೇಶಿಕ ಸಮಿತಿಯ ವೈದ್ಯಕೀಯ ವಿಭಾಗದ ಕಾರ್ಯಾಧ್ಯಕ್ಷ ಮೀರಾರೋಡಿನ ದೀಪಕ್ ಹಾಸ್ಪಿಟಲ್ ನ ಸಿ ಎಂ ಡಿ ಡಾಕ್ಟರ್ ಭಾಸ್ಕರ್ ಶೆಟ್ಟಿಯವರು ಕೊರೊನಾ ರೋಗದ ಬಗ್ಗೆ ಜಾಗೃತಿಯ ಮಾತುಗಳನ್ನಾಡುತ್ತ ಇನ್ನು ಮೂರು ನಾಲ್ಕು ವರ್ಷ ಇದೇ ರೀತಿಯ ಜೀವನ ನಡೆಸುವ ಸಾಧ್ಯತೆಯಿದೆ.

ಮಾಸ್ಕ್ ಧರಿಸಿದಲ್ಲಿ ವೈರಸ್ ಒಳ ಪ್ರವೇಶಿಸುವ ಸಂಭವ ಕಡಿಮೆಯಾಗುತ್ತದೆ. ಆದುದರಿಂದ ಮಾಸ್ಕನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು . ಒಬ್ಬರಿಂದ ಇನ್ನೊಬ್ಬರಿಗೆ ಹೇಗೆ ಹರಡುತ್ತದೆ ಎನ್ನುವುದು ಸಾಧ್ಯತೆಯಿದೆ. . ಶರೀರದಲ್ಲಿ ರೋಗನಿರೋಧಕ ಇಮ್ಯುನಿಟಿ ಯ ಹೆಚ್ಚಳ ವಾಗಬೇಕು.

ಆದಷ್ಟು ಅಂತರವನ್ನು ಕಾಪಾಡುದರಿಂದಲೂ ಒಬ್ಬರಿದೊಬ್ಬರಿಗೆ ವೈರಾಣು ಹರಡುವ ಸಾಧ್ಯತೆ ಕಡಿಮೆ. ಆದುದರಿಂದ ಮಾಸ್ಕನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು ಎನ್ನುತ್ತಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹೇಗೆ ಹರಡಬಹುದು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ತುಂಗಾ ಹಾಸ್ಪಿಟಲ್ ನ ಡಾಕ್ಟರ್ ಸತೀಶ್ ಶೆಟ್ಟಿ ಮತ್ತು ಅವರ ಸಿಬ್ಬಂದಿವರ್ಗ ಮತ್ತು. ಡಾಕ್ಟರ್ ಭಾಸ್ಕರ್ ಶೆಟ್ಟಿ ಯವರನ್ನು ಪ್ರಾದೇಶಿಕ ಸಮಿತಿಯ ವತಿಯಿಂದ ಸಂಘದ ಪ್ರಾದೇಶಿಕ ಸಮಿತಿಯ ಪಶ್ಚಿಮ ವಲಯದ ಸಮನ್ವಯಕರಾದ ಶಶಿಧರ್ ಕೆ ಶೆಟ್ಟಿ ಇನ್ನಂಜೆ, ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಸಂಚಾಲಕ ಗಿರೀಶ್ ಶೆಟ್ಟಿ ತೆಲ್ಲಾರ್ ಉಪಕಾರ್ಯಧ್ಯಕ್ಷ -ಉದಯ ಶೆಟ್ಟಿ ಪೆಲತ್ತೂರು, , ಕೋಶಾಧಿಕಾರಿ ದಾಮೋಧರ ಶೆಟ್ಟಿ, , ಜೊತೆ ಕೋಶಾಧಿಕಾರಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಚ್ಚರಿ ಗುತ್ತು ಶಾಲಿನಿ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಸಲಯ ಸಮಿತಿಯ ಕಾರ್ಯಾಧ್ಯಕ್ಷ ಅಮಿತಾ ಕೆ ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದರ್ಶ ಶೆಟ್ಟಿ ಉಪಸ್ಥರಿದ್ದರ ಗೌರವಿಸಿದರು.

ಕಾರ್ಯಕ್ರಮವನ್ನು ಬಂಟರ ಸಂಘದ ಉನ್ನತ ಶಿಕ್ಷಣ ಸಮಿತಿಯ ಉಪಕಾರ್ಯಧ್ಯಕ್ಷ ಕುತ್ಯಾರು ಕಿಶೋರ್ ಶೆಟ್ಟಿ ನಿರೂಪಿಸಿ ಸಮಾಜ ಬಾಂಧವರಿಗೆ ಸಾಕಾರ ಆಗಬೇಕೆನ್ನುವ ನಿಟ್ಟಿನಲ್ಲಿ ಬಂಟರ ಸಂಘದ ಹಲವಾರು ಯೋಜನೆಗಳು ಮುಂದಿನ ಈ ಪ್ರಾದೇಶಿಕ ಸಮಿತಿಯ ಬಂಧುಗಳಿಗೆ ಕೆಲಸ ನಡೆಯಲಿದೆ ಎಂದು ತಿಳಿಸಿದರು
ಬೆಳಿಗ್ಗಿನಿಂದಲೇ ಸುಮಾರು 300 ಜನ ಬಂಟ ಸಮಾಜದ ಬಂಧುಗಳಿಗೆ ಕೋರೋನಾ ಲಸಿಕೆಯನ್ನು ತುಂಗ ಹಾಸ್ಪಿಟಲ್ ನ ಸಹಯೋಗದೊಂದಿಗೆ ಪ್ರಾದೇಶಿಕ ಸಮಿತಿಯ ವೈದ್ಯಕೀಯ ವಿಭಾಗದ ಕಾರ್ಯಧ್ಯಕ್ಷ ಡಾ‌. ಭಾಸ್ಕರ್ ಶೆಟ್ಟಿಯವರ ಸಹಕಾರದೊಂದಿಗೆ ನಡೆಯಿತು.

ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಬಂಟರ ಸಂಘದ ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಧ್ಯಕ್ಷ ಕಿಶೋರ್ ಶೆಟ್ಟಿ ಸಲಹಾ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ ಕಾಶಿಮೀರಾ .ಮಹಿಳಾ ವಿಭಾಗದ ಸಲಹಾ ಸಮಿತಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಅಮಿತಾ ಕೆ. ಶೆಟ್ಟಿ , ಶಿಕ್ಷಣ ಮತ್ತು ಸಮಾಜ ಕಲ್ಯಾಣ ಭಾಸ್ಕರ ಶೆಟ್ಟಿ ಶಾರದಾ ಕ್ಲಾಸೆಸ್. ವೈದ್ಯಕೀಯ ಸಮಿತಿ ಕಾರ್ಯಧ್ಯಕ್ಷ ಡಾ| ಭಾಸ್ಕರ ಶೆಟ್ಟಿ (ದೀಪಕ್ ಹಾಸ್ಪಿಟಲ್) ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಭಾಗ ಕಾರ್ಯಧ್ಯಕ್ಷ ರಾಜೇಶ್ ಶೆಟ್ಟಿ .ಸದಸ್ಯ ನೋಂದಾವಣಿ ವಿಭಾಗ ಕಾರ್ಯಧ್ಯಕ್ಷ ಬಾಬಾ ಪ್ರಸಾದ್ ಅರಸ . ತಾಂತ್ರಿಕ ವಿಭಾಗ ಕಾರ್ಯಧ್ಯಕ್ಷ ವೈ.ಟಿ. ಶೆಟ್ಟಿ ಹೆಜಮಾಡಿ .ಕ್ಯಾಟರಿಂಗ್ ವಿಭಾಗ ಕಾರ್ಯಧ್ಯಕ್ಷ ಅಶೋಕ್ ಶೆಟ್ಟಿ (ಎಂ. ಟಿ. ಎನ್. ಎಲ್) , ಭಜನಾ ಸಮಿತಿ ಕಾರ್ಯಧ್ಯಕ್ಷ ವಿಜಯ ಶೆಟ್ಟಿ ಮೂಡು ಬೆಳ್ಳೆ. ಇ. ಉದ್ಯೋಗ ವಿಭಾಗ ಕಾರ್ಯಧ್ಯಕ್ಷ ಸಾಯಿ ಪ್ರಸಾದ್ ಪೂಂಜ. ಮಹಿಳಾ ವಿಭಾಗ ಉಪಕಾರ್ಯಾಧ್ಯಕ್ಷೆ ವಸಂತಿ ಎಸ್ ಶೆಟ್ಟಿ ಕಾರ್ಯದರ್ಶಿ ಸುಜಾತಾ ಪಿ ಶೆಟ್ಟಿ ಕೋಶಧಿಕಾರಿ ಶಿಲ್ಪ ಸಿ ಶೆಟ್ಟಿ ಜೊತೆ ಕಾರ್ಯದರ್ಶಿ ಶರ್ಮೀಲ ಪಿ ಶೆಟ್ಟಿ ಜೊತೆ ಕೋಶಧಿಕಾರಿ ಶೀಲ ಎಂ ಶೆಟ್ಟಿ. ಮತ್ತು ಲತಾ ಪಿ ಶೆಟ್ಟಿ ಮಮತಾ ವಿ ಶೆಟ್ಟಿ ವಿಭಾಗ ಸಮಿತಿ ಸದಸ್ಯರು.ವೃಷಭ ಶೆಟ್ಟಿ, ಸುಶಾಂತ್ ಶೆಟ್ಟಿ, ನಿಧಿ ಶೆಟ್ಟಿ ಕಲ್ಪಕ್ ಶೆಟ್ಟಿ, ನಿರೀಕ್ಷಾ ಶೆಟ್ಟಿ, .ವೈದ್ಯಕೀಯ ಸಮಿತಿ ಸದಸ್ಯರುಗಳು ಡಾ| ಪ್ರತಾ ಗೌರೀಶ್ ಶೆಟ್ಟಿ, ಡಾ| ಸತೀಶ್ ಶೆಟ್ಟಿ, ಡಾ| ಗೌರೀಶ್ ಶೆಟ್ಟಿ, ಡಾ| ಸನತ್ ಎ. ಹೆಗ್ಡೆ, ಡಾ| ಸ್ವರೂಪ ರೈ. ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಸಮಿತಿ ಸದಸ್ಯರುಗಳು , ಕರುಣಾಕರ ಶೆಟ್ಟಿ ಕುಕ್ಕುಂದೂರು, .ಕ್ಯಾಟರಿಂಗ್ ವಿಭಾಗದ ಸಮಿತಿ ಸದಸ್ಯರುಗಳಾದ ಗುಣಪಾಲ ಶೆಟ್ಟಿ ಕುಕ್ಕುಂದೂರು, ಸುರೇಶ ಶೆಟ್ಟಿ ಪಯ್ಯಾರ್ ಮತ್ತಿತರರು ಸಹಕಾರ ನೀಡಿದರು .

ಮತ್ತೆ ಮುಂಬಯಿಯಲ್ಲಿ ಕೊರೋನಾದ ಸಮಸ್ಯೆ ಅಧಿಕವಾಗುತ್ತಿದ್ದು ಬಂಟ ಸಮಾಜ ಬಾಂಧವರುುು ಈ ರೋಗಕ್ಕೆ ಒಳಗಾಗದಂತೆ ಲಸಿಕೆ ನೀಡುವ ಮೂಲಕ ಅವರ ಆರೋಗ್ಯವನ್ನುನು ಕಾಪಾಡಿಕೊಳ್ಳುವುದಕ್ಕೆ ಪ್ರಾದೇಶಿಕ ಸಮಿತಿ ಜವಾಬ್ದಾರಿಯನ್ನು ನಿರ್ವಹಿಸಿ ಕೊಂಡಿದೆ ಇದಕ್ಕೆ ತುಂಗಾ ಹಾಸ್ಪಿಟಲ್ನ , ಡಾ. ಸತೀಷ್ ಶೆಟ್ಟಿ, . ರಾಜೇಶ್ ಶೆಟ್ಟಿ .ಉಮೇಶ್ ಶೆಟ್ಟಿ ಹಾಗೂ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಹಾಗೂ ಇತರ ಗಣ್ಯರ ಸಹಕರಿಸಿದ್ದಾರೆ. ಸಮಾಜದ ಸುಮಾರು ಮುನ್ನೂರು ಮಂದಿಗೆ ಲಸಿಕೆಯನ್ನು ನೀಡಲಾಗಿದ್ದು ಇನ್ನೂ ಬಂಟ ಸಮಾಜದ ಮೀರಾ ಬಾಯಂಧರ್ ಪರಿಸರದ ಅನೇಕರು ಈ ಅವಕಾಶವನ್ನು ಪಡೆಯಲಿರುವರು . ಈ ಕಾರ್ಯಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಕೃತಜ್ನತೆ .
ಗಿರೀಶ್ ಶೆಟ್ಟಿ ತೆಳ್ಳಾರ್ –ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಸಂಚಾಲಕ

ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿಯವರು ಮತ್ತು ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಡಾಕ್ಟರ್ ಸತ್ಯಪ್ರಕಾಶ್ ಶೆಟ್ಟಿ ಅವರ ಮಾರ್ಗದರ್ಶನದಂತೆ ನಮ್ಮ ಸಮಾಜದ ಜನರಿಗೆ ಲಸಿಕೆಯನ್ನು ತುಂಗಾ ಹಾಸ್ಪಿಟಲ್ನಲ್ಲಿ ಸಹಯೋಗದಿಂದ ನೀಡಿದ್ದೇವೆ . ಸುಮಾರು ಮುನ್ನೂರಕ್ಕೂ ಮಿಕ್ಕಿ ಸಮಾಜದ ಹಿರಿಯರಿಗೆ ಕೊರೋನಾ ಲಸಿಕೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಮುಂದಿನ ದಿನಗಳಲ್ಲಿ ಕೂಡ ಈ ಸೇವಾಕಾರ್ಯವನ್ನು ರೂಪಿಸಿಕೊಳ್ಳುತ್ತೇವೆ . ಶಿವಪ್ರಸಾದ್ ಶೆಟ್ಟಿ –ಕಾರ್ಯಾಧ್ಯಕ್ಷ..ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ

ಅತಿ ಹೆಚ್ಚು ತಳಮಟ್ಟದ ಬಂಧುಗಳೇ ಇರುವ ವೀರ ಭಯಂದರ್ ಪರಿಸರದಲ್ಲಿ ಕೊರೋನಾದ ಬಗ್ಗೆ ಜಾಗೃತಿ ಅಭಿಯಾನದೊಂದಿಗೆ ಲಸಿಕೆಯನ್ನು ನೀಡಿ ಸಮಾಜ ಬಾಂಧವರ ಜೀವ ರಕ್ಷಣೆಯ ಇನ್ನು ಹೆಚ್ಚು ನಡೆಯುತ್ತಿರಬೇಕು ಆಗಿದೆ ಪ್ರತಿ ಪ್ರಾದೇಶಿಕ ಸಮಿತಿಯಲ್ಲಿ ಸಮಾಜದ ಬಂಧುಗಳಿಗೆ ಲಸಿಕೆಯನ್ನು ನೀಡುವ ಅಭಿಯಾನವನ್ನು ನಡೆಸುವುದು ಅಗತ್ಯವಿದೆ.  ಶಶಿಧರ್ ಕೆ ಶೆಟ್ಟಿ ಇನ್ನಂಜೆ -ಸಮನ್ವಯಕರು ಪಶ್ಚಿಮ ವಲಯ ಪ್ರಾದೇಶಿಕ ಸಮಿತಿ ಬಂಟರ ಸಂಘ

ಚಿತ್ರ-ವರದಿ ದಿನೇಶ್ ಕುಲಾಲ್

Comments are closed.