ಕರ್ನಾಟಕ

ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ ಇಂದು ಸಚಿವರೊಂದಿಗೆ ಸಿಎಂ ತುರ್ತು ಸಭೆ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವರ ಸಭೆ ಕರೆದಿದ್ದು ಮಾರ್ಚ್ 29 ಸೋಮವಾರ ಸಂಜೆ 5 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಯಲಿದೆ.

ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, “ಸೋಮವಾರ ನಡೆಯಲಿರುವ ಸಭೆಯಲ್ಲಿ ಗೃಹ ಸಚಿವರು, ಕಂದಾಯ ಸಚಿವರು ಮತ್ತು ಶಿಕ್ಷಣ ಸಚಿವರು ಮತ್ತು ನಾನು ಈ ವಿಷಯವನ್ನು ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ. ನಾಲ್ಕು ವಾರಗಳಿಂದ 300 ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಆದರೆ, ಈ ಪ್ರಕರಣಗಳು 3,000ರವರೆಗೆ ತಲುಪಿದೆ. ನಾವು ತೆಗೆದುಕೊಂಡ ಕ್ರಮ ಸಾಕಾಗುವುದಿಲ್ಲ. ರಾಜ್ಯದ ಗಡಿಗಳಲ್ಲಿ ಮತ್ತು ಆಗಮಿಸುವವರ ಮೇಲೆ ನಾವು ಕಠಿಣ ನಿಯಮಗಳನ್ನು ಕೈಗೊಳ್ಳಬೇಕಾಗಿದೆ. ನಾನು ಈ ವಿಷಯವನ್ನು ಗೃಹ ಸಚಿವರೊಂದಿಗೆ ಚರ್ಚಿಸಿದ್ದೇನೆ. ಸೋಮವಾರ ನಾವು ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇವೆ ಎಂದರು.

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಎರಡನೇ ಅಲೆಯಿಂದ ಸೋಂಕುಗಳು ಹೆಚ್ಚುತ್ತಿವೆ. ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿಯೂ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಮುಂದಿನ ಆರರಿಂದ ಎಂಟು ವಾರಗಳವರೆಗೆ ಅಗತ್ಯ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ. ತಾಂತ್ರಿಕ ಸಲಹಾ ಸಮಿತಿಯಿಂದಲೂ ನಮಗೆ ವರದಿಗಳು ಬಂದಿವೆ ಎಂದಿದ್ದಾರೆ.

Comments are closed.