ಕರಾವಳಿ

ಡಿ.ಕೆ.ಶಿವಕುಮಾರ್ ಕಾರಿನ ಮೇಲೆ ದಾಳಿ : ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಖಾದರ್ ಆಗ್ರಹ

Pinterest LinkedIn Tumblr

ಮಂಗಳೂರು : ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಕಾರಿನ ಮೇಲೆ ದುಷ್ಕರ್ಮಿಗಳು ಪ್ರತಿಭಟನೆಯ ನೆಪದಲ್ಲಿ ದಾಳಿ ನಡೆಸಿದ್ದು ಖಂಡನೀಯ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ಕೇರಳ ವಿಧಾನ ಸಭೆ ಚುನಾವಣೆಯ ಹಿನ್ನಲೆಯಲ್ಲಿ ಎಐಸಿಸಿ ವತಿಯಿಂದ ವಯನಾಡು ಜಿಲ್ಲೆಯ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಜಿಲ್ಲೆಯ ಎಲ್ಲಾ ಯು.ಡಿ.ಎಫ್ ಅಭ್ಯರ್ಥಿಗಳ ಗೆಲುವಿಗಾಗಿ ವಯನಾಡಿನಲ್ಲೇ ಠಿಕಾಣಿ ಹೂಡಿರುವ ಯು.ಟಿ.ಖಾದರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರಿನ ಮೇಲೆ ದುಷ್ಪರ್ಮಿಗಳ ದಾಳಿಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬೆಳಗವಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು ತೀವ್ರ ಖಂಡನೀಯ. ಪ್ರತಿಭಟನೆಯ ನೆಪದಲ್ಲಿ ಕಾನೂನು ಕೈಗೆತ್ತಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುಷ್ಕರ್ಮಿಗಳನ್ನು ಮಟ್ಟ ಹಾಕಲು ರಾಜ್ಯ ಸರಕಾರ ವಿಫಲವಾಗಿದೆ.ತಕ್ಷಣ ಗೃಹ ಸಚಿವರು ಈ ಬಗ್ಗೆ ಉತ್ತರವನ್ನು ನೀಡಬೇಕು,ಇಂಥಹ ಹೀನ ಕೃತ್ಯಕ್ಕೆ ಇಳಿದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

Comments are closed.