ಆರೋಗ್ಯ

ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಕೊರೋನಾ ಸ್ಫೋಟ; 115 ಪಾಸಿಟಿವ್ ಪ್ರಕರಣ ಪತ್ತೆ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಮತ್ತೆ ಕೊರೋನಾ ಸ್ಪೋಟವಾಗಿದ್ದು ಒಟ್ಟು 115 ಮಂದಿಗೆ ಕೋವಿಡ್-19 ದೃಢಪಟ್ಟಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಪತ್ತೆಯಾಗಿರುವ 115 ಮಂದಿಯಲ್ಲಿ 70 ಸೋಂಕಿತರು ಮಣಿಪಾಲದ ಎಂಐಟಿ ಕ್ಯಾಂಪಸ್ಗೆ ಸೇರಿದವರಾಗಿದ್ದಾರೆ . ಇದರೊಂದಿಗೆ ಈ ವರೆಗೆ ಎಂ ಐ ಟಿ ಕ್ಯಾಂಪಸ್ ಒಂದರಲ್ಲೆ 902 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಕಾರ್ಕಳ ತಾಲೂಕಿನ 69 ವರ್ಷದ ವೃದ್ಧರೋರ್ವರು ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.

Comments are closed.