ಕರ್ನಾಟಕ

ಬಿಜೆಪಿಯಲ್ಲಿ ಜವಬ್ದಾರಿ ಪಡೆದ ಜಗ್ಗೇಶ್: ಭಾ.ಜ.ಪಾ ಬೆಂಗಳೂರು ನಗರ ವಕ್ತಾರರಾಗಿ ನೇಮಕ

Pinterest LinkedIn Tumblr

ಬೆಂಗಳೂರು: ವಿಚಾರವೊಂದಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಂದ ಕೆಂಗಣ್ಣಿಗೆ ಗುರಿಯಾಗಿ ಭಾರೀ ಸುದ್ದಿಯಲ್ಲಿರುವ ನಟ ಜಗ್ಗೇಶ್ ಅವರನ್ನು ಬಿಜೆಪಿಯ ಬೆಂಗಳೂರು ನಗರ ಘಟಕದ ವಕ್ತಾರರಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ನಗರ ಸೇರಿದಂತೆ ಒಟ್ಟು 10 ನಗರಗಳಿಗೆ 10 ಮಂದಿಯನ್ನು ನೇಮಿಸಿ ಬಿಜೆಪಿ ಆದೇಶ ಹೊರಡಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗ್ಗೇಶ್ ಅವರು ಬಿಜೆಪಿ ಟಿಕೆಟ್ ನಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಇದೀಗ ಪಕ್ಷದಲ್ಲಿ ಸ್ಥಾನಮಾನ ಸಿಕ್ಕಿದೆ.

ತಮ್ಮನ್ನು ಗುರುತಿಸಿ ಪಕ್ಷ ನೀಡಿದ ಜವಾಬ್ದಾರಿಗೆ ನಟ ಜಗ್ಗೇಶ್ ಪಕ್ಷದ ನಾಯಕರಿಗೆ ಧನ್ಯವಾದ ಹೇಳಿದ್ದಾರೆ.

ಬಿಬಿಎಂಪಿ ವಾರ್ಡ್​ಗಳ ಪುನರ್​ವಿಂಗಡನೆ ಪ್ರಕ್ರಿಯೆ ವಿವಾದ ಮತ್ತು ಬಿಬಿಎಂಪಿ ಚುನಾವಣೆ ಸಮೀಪದಲ್ಲಿರುವುದರಿಂದ ಜಗ್ಗೇಶ್​ಗೆ ನೀಡಿರುವ ಹೊಸ ಹೊಣೆಗಾರಿಕೆ ಗಮನಾರ್ಹವಾಗಿದೆ.

ಜಗ್ಗೇಶ್ ಸೇರಿ 10 ಜನರನ್ನ ವಕ್ತಾರರನ್ನಾಗಿ ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಆದೇಶ ಹೊರಡಿಸಿದ್ದಾರೆ. ಆಡಳಿತ ಪಕ್ಷ ಬಿಜೆಪಿಯ ಸಾಧನೆಯನ್ನು ಜನರಿಗೆ ಮುಟ್ಟಿಸುವುದು, ಮಾಧ್ಯಮಗಳಿಗೆ ಪಕ್ಷದ ಕಾರ್ಯ ಸಾಧನೆ ಬಗ್ಗೆ ಹೇಳುವುದು, ಪಕ್ಷ ಮತ್ತು ಸರ್ಕಾರ ಮಾಡಿದ ಕೆಲಸಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ವಕ್ತಾರರು‌ ಮಾಡಬೇಕಿದೆ.

ಜಗ್ಗೇಶ್,​ ಬೆಂಗಳೂರು ವಕ್ತಾರರು
ಚಲವಾದಿ ನಾರಾಯಣಸ್ವಾಮಿ, ಬೆಂಗಳೂರು ವಕ್ತಾರರು
ತೇಜಸ್ವಿನಿ ಗೌಡ, ಬೆಂಗಳೂರು ವಕ್ತಾರರು
ಗಿರಿಧರ ಉಪಾಧ್ಯಾಯ, ಬೆಂಗಳೂರು ವಕ್ತಾರರು
ರಾಜೂಗೌಡ, ಯಾದಗಿರಿ ವಕ್ತಾರರು
ರಾಜುಕುಮಾರ್​ ಪಾಟೀಲ್​ ತೆಲ್ಕೂರ, ಕಲಬುರಗಿ ವಕ್ತಾರರು
ಗಣೇಶ್​ ಕಾರ್ಣಿಕ್,​ ಮಂಗಳೂರು ಮುಖ್ಯ ವಕ್ತಾರರು
ರಾಜೀವ್ ಬೆಳಗಾವಿ, ವಕ್ತಾರರು
ಎಂ.ಬಿ. ಜಿರಲಿ ಬೆಳಗಾವಿ, ವಕ್ತಾರರು

Comments are closed.