ಕರ್ನಾಟಕ

‘ಪೊಗರು’ ಸಿನೆಮಾದಲ್ಲಿ ಬ್ರಾಹ್ಮಣರ ಅವಹೇಳನ ಆರೋಪ: ಪ್ರತಿಭಟನೆ ಎಚ್ಚರಿಕೆ ನೀಡಿದ ಬ್ರಾಹ್ಮಣ ಸಮುದಾಯ..!

Pinterest LinkedIn Tumblr

ಬೆಂಗಳೂರು: ಫೆ.19 ಶುಕ್ರವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾ ತಂಡಕ್ಕೆ ಇದೀಗಾ ವಿವಾದವೊಂದು ತಗಲಾಕ್ಕಿಕೊಂಡಿದೆ. ಸಿನಿಮಾದ ದೃಶ್ಯವೊಂದರಲ್ಲಿ ಆಕ್ಷೇಪಾರ್ಹ ಸಂಗತಿ ಇದೆ ಎಂದು ಸಿನೆಮಾ ವಿರುದ್ಧ ಬ್ರಾಹ್ಮಣ ಸಮುದಾಯ ಗರಂ ಆಗಿದೆ.

ಸಿನಿಮಾದಲ್ಲಿನ ದೃಶ್ಯವೊಂದರಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದೆ. ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವುದಕ್ಕೆ ನಿರ್ದೇಶಕರ ವಿರುದ್ಧವೂ ಅಸಮಾಧಾನ ಹೊರಹಾಕಲಾಗಿದೆ.

ಪೊಗರು ಚಿತ್ರತಂಡವು ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯಗಳನ್ನು ಸಿನಿಮಾದಿಂದ ತೆಗೆಯದಿದ್ದಲ್ಲಿ, ದೂರು ನೀಡುವ ಜೊತೆಗೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಎಚ್ಚರಿಕೆ ನೀಡಿದ ಬಹಿರಂಗ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವುದು ನಿಜಕ್ಕೂ ಖಂಡನೀಯ, ಬ್ರಾಹ್ಮಣರು ತಿರುಗಿ ಬಿಳುವುದಿಲ್ಲ ಅನ್ನುವ ಆಲೋಚನೆ ಇದ್ದಾರೆ ಅದು ತಪ್ಪು ಕಲ್ಪನೆ, ನಾನು ನಿರ್ದೇಶಕರಿಗೆ ಈ ಕೂಡಲೇ ಅವಹೇಳನಕಾರಿ ಪದವನ್ನು ಚಿತ್ರದಿಂದ ತೆಗೆದು ಹಾಕಬೇಕೆಂದು ಆಗ್ರಹಿಸುತ್ತೇನೆ’ ಎಂದಿದ್ದಾರೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್.ಸಚ್ಚಿದಾನಂದ ಮೂರ್ತಿ.

Comments are closed.