ಕರಾವಳಿ

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಯಕ್ಷಗಾನ ಹಿರಿಯ ಕಲಾವಿದ – ಚಿಕಿತ್ಸೆಗೆ ನೆರವಾಗಲು ಮನವಿ

Pinterest LinkedIn Tumblr

ಮಂಗಳೂರು: ಯಕ್ಷಗಾನ ಹಿರಿಯ ಕಲಾವಿದ, ಪ್ರಸಂಗಕರ್ತ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಪ್ರಧಾನ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಒಂದೂವರೆ ತಿಂಗಳಿನಿಂದ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುರುಷೋತ್ತಮ ಪೂಂಜ ಅವರ ಚಿಕಿತ್ಸೆಗೆ ನೆರವು ನೀಡುವಂತೆ ಅವರ ಪುತ್ರರಾದ ಪರೀಕ್ಷಿತ ಪೂಂಜ ಹಾಗೂ ಜೀವಿತೇಶ ಪೂಂಜ ಕಲಾಭಿಮಾನಿಗಳಲ್ಲಿ ಹಾಗೂ ಸಹೃದಯರಲ್ಲಿ ವಿನಂತಿಸಿದ್ದಾರೆ.

‘ನನ್ನ ತಂದೆ ಮೈಲೋ ಡಿಸ್ ಪ್ಲಾಸಿಯಾ ಎಂಬ ರಕ್ತ ಸಂಬಂಧಿ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾದ ಅವರು ಕಳೆದ ಎರಡು ತಿಂಗಳಿನಿಂದ ವೈದ್ಯಕೀಯ ಶೂಶ್ರೂಷೆಯಲ್ಲಿದ್ದಾರೆ.

ಸದ್ಯ ಅವರ ಆರೋಗ್ಯ ಸಂಬಂಧಿತ ಸಮಸ್ಯೆಗೆ ಚಿಕಿತ್ಸೆಗಾಗಿ ದುಬಾರಿ ವೆಚ್ಚದ ಔಷಧ ನೀಡಬೇಕಾಗಿದ್ದು, ತಿಂಗಳಿಗೆ 5 ಲಕ್ಷ ರೂ. ಅವಶ್ಯಕತೆಯಿದೆ. ಒಟ್ಟು 6 ತಿಂಗಳು ಅವರಿಗೆ ಈ ಚಿಕಿತ್ಸೆಯನ್ನು ನೀಡಬೇಕಾಗಿದ್ದು ಸುಮಾರು 30 ರಿಂದ 35 ಲಕ್ಷ ರೂಪಾಯಿಯ ಅವಶ್ಯಕತೆಯಿದೆ. ಅವರ ಚಿಕಿತ್ಸೆಗಾಗಿ ನೆರವಾಗಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ’ ಎಂದು ಪರೀಕ್ಷಿತ ಪೂಂಜ ಹೇಳಿದ್ದಾರೆ.

ಅಭಿನವ ವಾಲ್ಮೀಕಿ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಚಿಕಿತ್ಸೆಗೆ ನೆರವಾಗುವವರು ಅವರ ಪುತ್ರನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು.

ಬ್ಯಾಂಕ್ ಖಾತೆ ವಿವರ:
ಹೆಸರು: ಪರೀಕ್ಷಿತ್ ಪೂಂಜ
ಬ್ಯಾಂಕ್: ಐಸಿಐಸಿಐ ಕೋರಮಂಗಲ ಶಾಖೆ
Account number : 343901507425
IFSC: ICIC0003439

Google pay no: 8197256366

Comments are closed.