ಕರಾವಳಿ

ಮನಸ್ಸು ಶರೀರದ ಸ್ವಚ್ಛತೆಗೆ ಆದ್ಯತೆ ನೀಡಿ-ಭಗವತ್ ಭಾವನೆಯ ಸೇವೆ ಶ್ರೇಷ್ಠ : ಸ್ವಾಮಿನಿ ಮಂಗಳಾಮೃತ ಪ್ರಾಣ

Pinterest LinkedIn Tumblr

ಮಂಗಳೂರು : ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಕೇರಳದ ಅಮೃತಪುರಿಆಶ್ರಮದಿಂದ ಸನ್ಯಾಸ ದೀಕ್ಷೆ ಪಡೆದು ಆಗಮಿಸಿದ ಪೂಜನೀಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಭವ್ಯವಾದ ಸ್ವಾಗತ ನೀಡಲಾಯಿತು.

ಅವರು ಭಕ್ತರನ್ನುದ್ದೇಶಿಸಿ ಆಶೀರ್ಚವನವಿತ್ತು” ಅಮ್ಮನ ಭಕ್ತರು ಭಯಮುಕ್ತ ಜೀವನ ನಡೆಸುವಂತೆ ಅಮ್ಮ ಅಭಯ ನೀಡಿರುತ್ತಾರೆ, ಅಲ್ಲದೆ ಪೂಜೆ, ಪ್ರಸಾದ ಹಾಗೂ ಪೂಜಾಪಾತ್ರೆಗಳ ಮಹತ್ವದ ಬಗ್ಗೆ ತಿಳಿಸಿ ಜೀವನದಲ್ಲಿ ನಮ್ಮ ಕೃತಿ, ಆಲೋಚನೆಗಳು ಭಗವಂತನ ಪೂಜೆ ಎಂಬಂತಿರಬೇಕು ಮತ್ತು ಬರುವ ಎಲ್ಲವನ್ನೂ ಪೂಜೆಯ ಪ್ರಸಾದ ಎಂಬಂತೆ ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವ ಅಗತ್ಯತೆ , ಪೂಜಾ ಪಾತ್ರೆಗಳನ್ನು ಸ್ವಚ್ಛವಾಗಿಡುವಂತೆ ನಮ್ಮ ಮನಸ್ಸು ಶರೀರದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕರೆಯಿತ್ತರು.

ಈ ಸಂದರ್ಭದಲ್ಲಿ ಬ್ರಹ್ಮಸ್ಥಾನ ಕ್ಷೇತ್ರದ ಹಿರಿಯ ಸೇವಾರ್ಥಿ ಶ್ರೀ ಭೋಜರಾಜ್ ಕರ್ಕೇರ ಹಾಗೂ ಅರ್ಚಕ ಬ್ರಹ್ಮಚಾರಿ ರತೀಶ್ ಇವರನ್ನು ಸನ್ಮಾನಿಸಲಾಯಿತು.

ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಮತ್ತು ಅಮ್ಮನ ಭಕ್ತರ ಪರವಾಗಿ ಪೂಜನೀಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರಿಗೆ ಗೌರವಾರ್ಪಣೆ ಮಾಡಿ ಮಾತನಾಡಿದ ಸೇವಾ ಸಮಿತಿಯ ಗೌರವಾಧ್ಯಕ್ಷರೂ , ಅಮಲ ಭಾರತ ಅಭಿಯಾನದ ಅಧ್ಯಕ್ಷರೂ ಆಗಿರುವ ಡಾ.ಜೀವರಾಜ್ ಸೊರಕೆ ಮಂಗಳೂರಿನ ಮಠದ ವತಿಯಿಂದ ಕಳೆದ ಎರಡು ದಶಕಗಳಲ್ಲಿ ಅವರ ಸಾರಥ್ಯದಲ್ಲಿ ಹಮ್ಮಿಕೊಂಡು ಬಂದಿರುವ ಆಧ್ಯಾತ್ಮಿಕ, ಶೈಕ್ಷಣಿಕ, ವೈದ್ಯಕೀಯ ಹಾಗೂ ಸಾಮಾಜಿಕ ಸೇವೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

 
 

ಗೌರವಾಧ್ಯಕ್ಷರಾದ ಸಿ.ಎ.ವಾಮನ್ ಕಾಮತ್ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ.ದೇವದಾಸ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ. ವಸಂತಕುಮಾರ ಪೆರ್ಲ, ಗೌರವಾಧ್ಯಕ್ಷರಾದ ಶ್ರೀಮತಿ ಶ್ರುತಿ ಹೆಗ್ಡೆ, ಉಪಾಧ್ಯಕ್ಷ ಮುರಳೀಧರ ಶೆಟ್ಟಿ ಮತ್ತು ಕಾರ್ಯದರ್ಶಿ ಪಂಕಜ್ ವಸಾನಿ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಭಕ್ತರಿಂದ ಮಹಾಕಲಶಾಭಿಷೇಕ:

ಬ್ರಹ್ಮಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು, ಮಂಗಳೂರು, ಉಡುಪಿ, ಕುಂದಾಪುರ, ಸುಬ್ರಹ್ಮಣ್ಯ, ಕಡಬ, ಮುಲ್ಕಿ,ಉಪ್ಪುಂದ-ಬೈಂದೂರು ಸಮಿತಿಗಳ ಪದಾಧಿಕಾರಿಗಳು ಮಹಾ ಕಲಶಾಭಿಷೇಕದಲ್ಲಿ ಭಾಗವಹಿಸಿದರು. ಆಗಮಿಸಿದ ಎಲ್ಲಾ ಭಕ್ತರಿಗೆ ಪ್ರಸಾದ ಹಾಗೂ ಮಹಾಪ್ರಸಾದ ವಿತರಣೆ ಮಾಡಲಾಯಿತು.

Comments are closed.