ಕರ್ನಾಟಕ

ಮಲೆನಾಡಿನ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಗಮನಸೆಳೆದ ಸಂಸದೆ ಕರಂದ್ಲಾಜೆ

Pinterest LinkedIn Tumblr

ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿನ ಹವಮಾನ ವೈಪರೀತ್ಯದಿಂದ ತೀವ್ರತರದ ಸಂಕಷ್ಟದಲ್ಲಿರುವ ರಾಜ್ಯದ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ದೇಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಭೇಟಿಯಾದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿಚಾರದ ಬಗ್ಗೆ ಮನದಟ್ಟು ಮಾಡಿದರು.

ಕಳೆದ ಕೆಲವು ವರ್ಷಗಳಿಂದ ಮಲೆನಾಡಿನ ಕಾಫಿ ಬೆಳೆಗಾರರು ನಿತ್ಯವೂ ಅತಿವೃಷ್ಟಿ, ಅನಾವೃಷ್ಟಿ, ಕಾರ್ಮಿಕರ ಸಮಸ್ಯೆ, ಬೆಳೆಗೆ ತಕ್ಕ ಬೆಲೆ ಇಲ್ಲದಿರುವುದು ಸೇರಿದಂತೆ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ.

ಅತಿವೃಷ್ಟಿ, ರೋಗಬಾಧೆ ಮುಂತಾದ ಸಮಸ್ಯೆಗಳಿಂದ ಬಸವಳಿದ ಕಾಫಿ ಉದ್ಯಮವನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯದ ಪರಿಹಾರ ಹಾಗೂ ಸಾಲ ನೀತಿಗಳನ್ನು ಬೆಳೆಗಾರರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕು, ಬೆಳೆಗಾರರ ಸಂಕಷ್ಟಕ್ಕೆ ಸಹಾಯ ಮಾಡುವಂತೆ ವಿನಂತಿಸಿದರು.

ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬದ್ಧವಾಗಿದೆ, ಈ ನಿಟ್ಟಿನಲ್ಲಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಭರವಸೆಯನ್ನು ನೀಡಿದ್ದಾರೆ ಎಂದು ಸಂಸದೆ ಕರಂದ್ಲಾಜೆ ತಿಳಿಸಿದರು.

Comments are closed.