ಮಂಗಳೂರು ನವೆಂಬರ್ 26 :ಡಾ. ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ, ಇಲ್ಲಿಯ ಐ.ಕ್ಯೂ.ಎ.ಸಿ. ಮತ್ತು ಎನ್.ಎಸ್.ಎಸ್ ಘಟಕ ಹಾಗೂ ಲಯನ್ಸ್‍ಕ್ಲಬ್ ಮಂಗಳಾದೇವಿ ಇವುಗಳ ಜಂಟಿಆಶ್ರಯದಲ್ಲಿ ಪೋಕ್ಸೋ ಕಾಯಿದೆಯ ಕುರಿತು ಕಾನೂನು ಮಾಹಿತಿಕಾರ್ಯಕ್ರಮವುಜರುಗಿತು.
ಇತೀಚೆಗೆ ನಗರದ ಕಾಸ್‌ಸ್ಟ್ರೀಟ್ ಕಾಲೇಜಿನಲ್ಲಿ ಜಿಲ್ಲಾ ಕಾನೂನು ವೇದಿಕೆಯಅಧ್ಯಕ್ಷರು ಹಾಗೂ ವಕೀಲ ಎಸ್.ಪಿ ಚಂಗಪ್ಪರವರು ಉದ್ಘಾಟಿಸಿ ಮಾತನಾಡಿಸಿ, ಪ್ರತಿಯೊಬ್ಬರಿಗೂ ಪೋಕ್ಸೊ ಮತ್ತು ಸೈಬರ್ ಕ್ರೈಮ್ ಕಾಯಿದೆಯ ಪರಿಜ್ಞಾನ ಇರಬೇಕು.
ಕಾನೂನು ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೆರಕ್ಷಣೆಯ ನೆಲೆಯಾಗಿದೆ. ಯುವಜನರು ಸಾಮಾನ್ಯವಾದ ಕಾನೂನಿನ ಜ್ಞಾನವನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ.ಬದುಕಿನ ಪ್ರತಿಯೊಂದು ಕ್ಷಣಗಳು ಕಾನೂನಿನ ಸಹಾಯದಿಂದ ಮುನ್ನಡೆಯುತ್ತಿದೆ.ಭ್ರೂಣಹತ್ಯೆ ನಿಷೇಧ ಕಾಯಿದೆ, ವಿವಾಹ ಕಾಯ್ದೆ, ವಿಶ್ವವಿದ್ಯಾನಿಲಯ ಶಿಕ್ಷಣ ಕಾಯ್ದೆ, ಕಡ್ಡಾಯ ಶಿಕ್ಷಣ ಕಾಯ್ದೆ, ಬಾಲ ಕಾರ್ಮಿಕ ನಿಷೇಧಕಾಯ್ದೆ, ಮೊದಲಾದ ಕಾಯ್ದೆಗಳ ಕುರಿತು ಮಾಹಿತಿಯನ್ನು ನೀಡಿದರು.
ಕಾಲೇಜಿನಮುಖ್ಯ ಶೈಕ್ಷಣಿಕ ಸಲಹೆಗಾರಡಾ.ಶಿವರಾವi ಪಿ ಮಾತನಾಡಿ, ವಿದ್ಯಾರ್ಥಿಗಳು ಪ್ರಸ್ತುತ ಸಮಾಜದಲ್ಲಿ ಕಾನೂನಿನ ಮಾಹಿತಿಜ್ಞಾನವನ್ನು ಸಂಪೂರ್ಣ ತಿಳಿಯದೆ ಜೀವನವೇ ದ್ವಂದ್ವ ರೀತಿಯಲ್ಲಿ ನಡೆಯುವಂತಾಗಿದೆ. ಯುವ ಸಮುದಾಯಗಳು ದೇಶದ ಕಾನೂನಿನ ಚೌಕಟನ್ನು ಸರಿಯಾಗಿ ಅರ್ಥೈಸಿಕೊಳ್ಳುವಂತವರಾಗಬೇಕೆಂದರು.
ಕಾರ್ಯಕ್ರಮದಲ್ಲಿಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ ಹೆಬ್ಬಾರ್ ಸಿ, ಲಯನ್ಸ್‍ಕ್ಲಬ್‍ಮಂಗಳಾದೇವಿ ಇದರ ಅಧ್ಯಕ್ಷ ಚಂದ್ರಹಾಸ. ಲಯನ್ಸ್‍ಕ್ಲಬ್‍ನ ಕೋಶಾಧಿಕಾರಿ ಪ್ರದೀಪ್ ಶೆಟ್ಟಿ, ಪದಾಧಿಕಾರಿಗಳಾದರ ಘುರಾಮರೈ ಮತ್ತುಆನಂದ ಶೆಟ್ಟಿ ಸಿ,ಐ.ಕ್ಯೂ.ಎ.ಸಿ.ಸಂಯೋಜಕರು ಹಾಗೂ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ತೆರೆಜ್ ಪಿರೇರಾ, ಪ್ರೊ. ಅರುಣಕುಮಾರಿ, ಪ್ರೊ.ತ್ರಿಶಾಂತ್‍ಮತ್ತಿತರರು ಉಪಸ್ಥಿತರಿದ್ದರು.