ಕರ್ನಾಟಕ

ಭಾರಿ ಮಳೆಗೆ ಶಿಥಿಲಗೊಂಡಿದ್ದ ಸೇತುವೆ ಪರಿಶೀಲನೆ ಸಂದರ್ಭ ಮತ್ತೆ ಕುಸಿತ, ಶಾಸಕ ಪಾರು

Pinterest LinkedIn Tumblr


ರಾಯಚೂರು: ಭಾರೀ ಮಳೆಗೆ ಶಿಥಿಲಗೊಂಡಿದ್ದ ಸಿರವಾರ ತಾಲೂಕಿನ ನುಗಡೋಣಿ-ಹೊಸೂರು ಸಿದ್ದಗರ್ಚಿ ಸೇತುವೆ ಪರಿಶೀಲನೆ ವೇಳೆ ಸೇತುವೆ ಮತ್ತಷ್ಟು ಕುಸಿದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ವರದಿಯಾಗಿದೆ.

ಕುಸಿದು ಬಿದ್ದ ಸೇತುವೆಯನ್ನ ಶಾಸಕರು ನೋಡಲು ಬಂದಾಗ ಅವರೊಂದಿಗೆ ಅನೇಕರು ಸೇತುವೆ ಮೇಲೆ‌ ನಿಂತಿದ್ದರು. ಆಗ ಸೇತುವೆ ಮತ್ತಷ್ಟು ಕುಸಿಯಿತು.

ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಶಾಸಕರ ಕಾರಿನಲ್ಲೇ ಆಸ್ಪತ್ರೆಗೆ ಕರೆದೊಯ್ದ ದಾಖಲಿಸಲಾಯಿತು.

ಸಿರವಾರ ತಾಲೂಕಿನ ಮಲ್ಲಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನುಗಡೋಣಿ – ಹೊಸೂರು ಸಿದ್ದಗರ್ಚಿ ಯ ಸೇತುವೆ ಬಳಿ ಈ ಘಟನೆ ನಡೆದಿದೆ.

ಎರಡು ದಿನಗಳ ಹಿಂದೆ ಭಾರಿ ಮಳೆಗೆ ಸೇತುವೆ ಕುಸಿದು ಬಿದ್ದಿತ್ತು. ಈ ಸೇತುವೆ ವೀಕ್ಷಣೆಗೆ ಮಾನ್ವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಸಕರ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಮಳೆಗೆ ಹಾಳಾಗಿದ್ದ ಸೇತುವೆ ಮೇಲೆ ಶಾಸಕರು ಹಾಗೂ ಅವರ ಹಿಂಬಾಲಕರು ನಿಂತ ಸಮಯದಲ್ಲಿ ಮತ್ತೆ ಕುಸಿದು ಬಿದ್ದಿದೆ. ಶಾಸಕರ ಪಕ್ಕದಲ್ಲಿ ಇದ್ದವರು ಸೇತುವೆಯ ಕಮರಿನಲ್ಲಿ ಬಿದ್ದಿದ್ದಾರೆ. ಹೆಚ್ಚಿನ ಭಾರದಿಂದ ಹಾಳಾದ ಸೇತುವೆ ಮತ್ತಷ್ಟು ಕುಸಿದು ಬಿದ್ದಿತು ಎಂದು ಪ್ರತ್ಯಕ್ಷದರ್ಶಿಗಳ ಮಾಹಿತಿ ನೀಡಿದ್ದಾರೆ.

Comments are closed.