
ಬೆಂಗಳೂರು: ಎದೆನೋವು ಕಾಣಿಸಿಕೊಂಡ ಕಾರಣ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಬೆಂಗಳೂರು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಣ್ಣದಾಗಿ ಎದೆನೋವು ಕಾಣಿಸಿಕೊಂಡ ಕಾರಣ ಕೂಡಲೇ ಸಂಸದರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ಮೂಲಗಳು ಹೇಳಿದೆ.
ಇನ್ನು ಈ ಸಂಬಂಧ ಸಂಸದ ಜಾಧವ್ ಸ್ವತಃ ಟ್ವೀಟ್ ಮಾಡಿದ್ದು “ಇಂದು (ಸೋಮವಾರ) ಬೆಳಿಗ್ಗೆ ಎದೆನೋವಿನಿಂದಾಗಿ, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ಆ ವೇಳೆ ಅಲ್ಲಿನ ಆಸ್ಪತ್ರೆ ಮುಖ್ಯಸ್ಥರಾದ ಡಾ.ಮಂಜುನಾಥ್ ಸಿಎನ್ ಅವರ ಸಲಹೆಯಂತೆ ಕೆಲ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದೇನೆ. ಅಲ್ಲದೆ ಹೆಚ್ಚಿನ ತಪಾಸಣೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಲು ನನಗೆ ಸೂಚಿಸಲಾಗಿದೆ.
“ಆರೋಗ್ಯದ ಬಗ್ಗೆ ಚಿಂತಿಸಬೇಕಿಲ್ಲ, , ನಾನು ಶೀಘ್ರದಲ್ಲೇ ಗುಣಮುಖವಾಗಿ ಹಿಂತಿರುಗುತ್ತೇನೆ.” ಎಂದಿದ್ದಾರೆ.
Comments are closed.