ಕರ್ನಾಟಕ

ಕೊರೋನಾದಿಂದ ಗುಣಮುಖರಾದವರಿಗೆ ಮತ್ತೆ ಉಲ್ಬಣಿಸುತ್ತಿರುವ ಸೋಂಕು: ವೈದ್ಯರಲ್ಲಿ ಆತಂಕ

Pinterest LinkedIn Tumblr


ಮೈಸೂರು: ಕೊರೋನಾ ಸೋಂಕಿನಿಂದ ಗುಣಮುಖರಾದ ಹಲವರಲ್ಲಿ ಸೋಂಕು ಮತ್ತೆ ಬರುತ್ತಿರುವುದು ಇಲ್ಲಿನ ವೈದ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಒಂದು ಕಡೆ ಕೊರೋನಾ ಪ್ರಕರಣಗಳು ಅಧಿಕವಾಗುತ್ತಿದ್ದು, ಮತ್ತೊಂದೆಡೆ ಸೋಂಕು ಮರುಕಳಿಸುತ್ತಿರುವುದು ಆತಂಕದ ವಿಷಯವಾಗಿದೆ. ಗುಣಮುಖರಾದವರಲ್ಲಿ ಸೋಂಕು ನಿಷ್ಕ್ರಿಯವಾಗಿದ್ದು ನಂತರ ಉಲ್ಬಣಿಸುತ್ತಿರುವುದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.

ಗುಣಮುಖರಾದ ಶೇ.5-10 ರಷ್ಟು ರೋಗಿಗಳಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದ್ದು ಎಷ್ಟು ಪ್ರಕರಣಗಳು ಪುನ ಸಕ್ರಿಯಗೊಳ್ಳುತ್ತಿವೆ ಎಂಬ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಪಿ. ನಂಜರಾಜ್ ತಿಳಿಸಿದ್ದಾರೆ.

ವೈರಸ್ ನ ರೂಪಾಂತರ ಮತ್ತು ಪ್ರತಿ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ವಿಭಿನ್ನವಾಗಿರುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಕೊರೋನಾದಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ಮತ್ತೆ ಸಮಸ್ಯೆಗಳು ಹೆಚ್ಚುತ್ತಿವೆ, ಶ್ವಾಸಕೋಶದ ಫೈಬ್ರೋಸಿಸ್ ಮತ್ತು ನಡವಳಿಕೆಯ ಬದಲಾವಣೆಗಳೊಂದಿಗೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಗಳಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

Comments are closed.