ಮನೋರಂಜನೆ

ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಂದರ್ಶನದ ವೀಡಿಯೋ ವೈರಲ್

Pinterest LinkedIn Tumblr


ಮುಂಬೈ: ಬಾಲಿವುಡ್ ಮಾ#ದಕ ವಸ್ತು ಜಾಲದಲ್ಲಿ ಭಾಗಿಯಾಗಿರುವ ಆ#ರೋಪದ ಕುರಿತು ವಿಚಾರಣೆ ಎದುರಿಸಲು ನಟಿ ದೀಪಿಕಾ ಪಡುಕೋಣೆಗೆ ಎನ್‌ಸಿಬಿ ನೋಟೀಸ್ ನೀಡಿತ್ತು. ಈಗ ಅವರ ಸಂದರ್ಶನದ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.

‘ರಾಹುಲ್ ಗಾಂಧಿಯವರು ದೇಶಕ್ಕಾಗಿ ಏನು ಮಾಡುತ್ತಿದ್ದಾರೋ ಅದು ನಿಜಕ್ಕೂ ಒಂದು ಕ್ಲಾಸಿಕ್ ಉದಾಹರಣೆ. ಒಂದು ದಿನ ಅವರು ಪ್ರಧಾನಿಯಾಗುತ್ತಾರೆ. ಯುವ ಜನತೆ ಜೊತೆ ರಾಹುಲ್ ಬೇಗ ಕನೆಕ್ಟ್ ಆಗುತ್ತಾರೆ. ಅವರ ಆಲೋಚನೆ-ವಿಚಾರಗಳೆಲ್ಲವೂ ಸಾಂಪ್ರದಾಯಿಕವಾದುದು. ಅದರ ಜೊತೆಗೆ ಭವಿಷ್ಯದ ಬಗೆಗೆ ಮುಂದಾಲೋಚನೆ ಹೊಂದಿದ್ದಾರೆ’ ಎಂದು ಹಳೆಯ ಸಂದರ್ಶನವೊಂದರಲ್ಲಿ ದೀಪಿಕಾ ಹೇಳಿದ್ದರು.

ಎನ್‌ಸಿಬಿ ಅಧಿಕಾರಿಗಳು ದೀಪಿಕಾ ಪಡುಕೋಣೆಯ ತನಿಖೆ ನಡೆದ ನಂತರ ಈ ವಿಡಿಯೋ ವೈರಲ್ ಆಗುತ್ತಿದೆ. 2017ರಲ್ಲಿ ಡ್ರ#ಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಅವರ ಮ್ಯಾನೇಜರ್ ಕರೀಷ್ಮಾ ಜೊತೆ ವಾಟ್ಸಪ್ ಚಾಟ್ ಮಾಡಿದ್ದರು. ಇದರ ಆಧಾರದ ಮೇಲೆ ದೀಪಿಕಾಗೆ ಎನ್‌ಸಿಬಿ ನೋಟಿಸ್ ನೀಡಿ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿತ್ತು.

ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಅವರಿಗೆ ಸೆಪ್ಟೆಂಬರ್ 23ರಂದು ವಿಚಾರಣೆಯಲ್ಲಿ ಭಾಗಿಯಾಗುವಂತೆ ಎನ್‌ಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ದೀಪಿಕಾ ಗೋವಾದಲ್ಲಿದ್ದಾಗ ಅವರಿಗೆ ನೋಟಿಸ್ ತಲುಪಿತ್ತು. ಆನಂತರ ಅವರು ಗಂಡ ರಣವೀರ್ ಸಿಂಗ್ ಜೊತೆಗೆ ಮುಂಬೈಗೆ ಬಂದಿದ್ದರು.

Comments are closed.