ಕರ್ನಾಟಕ

ಶೀಘ್ರದಲ್ಲೇ ಪರಿಶಿಷ್ಟ ಜಾತಿ, ವರ್ಗದ ಅಭ್ಯರ್ಥಿಗಳಿಗೆ ಸೇವಾ ಸಿಂಧು ಯೋಜನೆಯಡಿ ಸಿಂಧುತ್ವ ಪ್ರಮಾಣ ಪತ್ರ

Pinterest LinkedIn Tumblr

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಜಾತಿ ಸಿಂಧುತ್ವಕ್ಕೆ ಪ್ರಮಾಣ ಪತ್ರವನ್ನು ನೀಡಲು ಹಿಂದಿನ ಹಸ್ತಚಾಲಿತ ವ್ಯವಸ್ಥೆಯನ್ನು ಕೈಬಿಟ್ಟು ಸೇವಾ ಸಿಂಧು ಯೋಜನೆಯಡಿ ಎಲ್ಲಾ ಇಲಾಖೆಗಳ ನೇಮಕಾತಿ ಪ್ರಾಧಿಕಾರ, ಆಯೋಗ, ವಿಶ್ವವಿದ್ಯಾಲಯ, ಸ್ಥಳೀಯ ಸಂಸ್ಥೆ, ಸ್ವಾಯತ್ತ ಸಂಸ್ಥೆ, ನಿಗಮ, ಮಂಡಳಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು ಈ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಿಕೊಂಡು ಆಯ್ಕೆಯಾದ ಅಭ್ಯರ್ಥಿಗಳ ವಿವರಗಳನ್ನು ಸೇವಾಸಿಂಧು ತಂತ್ರಾಂಶದಲ್ಲಿ ಅಳವಡಿಸುವಂತೆ ತಿಳಿಸಿದೆ.

ಇನ್ಮುಂದೆ ಸೇವಾ ಸಿಂಧು ಯೋಜನೆಯಡಿ ಆಯ್ಕೆಯಾದಂತ ಅಭ್ಯರ್ಥಿಗಳಿಗೆ ಜಾತಿ ಸಿಂಧತ್ವ ಪ್ರತ್ರವನ್ನು ಹಸ್ತ ಚಾಲಿತ ವ್ಯವಸ್ಥೆ ಕೈಬಿಟ್ಟು, ಸೇವಾ ಸಿಂಧು ಯೋಜನೆಯಡಿ ನೀಡಲು ತಿಳಿಸಲಾಗಿದೆ. ಈ ಮೂಲಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಪರಿಶಿಷ್ಟ ಜಾತಿ, ವರ್ಗದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಅನ್ನು ನೀಡಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ಕಟ್ಟಡ, ಉರ್ವಸ್ಟೋರ್, ಅಶೋಕನಗರ ಅಂಚೆ, ಮಂಗಳೂರು, ದೂರವಾಣಿ ಸಂಖ್ಯೆ: 0824 2451237 ಸಂಪರ್ಕಿಸುವಂತೆ ದ.ಕ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Comments are closed.