ಕರ್ನಾಟಕ

‘ನೈತಿಕ ಪೊಲೀಸ್ ಗಿರಿಗೆ ಅವಕಾಶವೇ ಇಲ್ಲ’- ನಟಿ ಸಂಯುಕ್ತಾ ಹೆಗ್ಡೆ ಪರ ನಿಂತ ಶೋಭಾ ಕರಂದ್ಲಾಜೆ!

Pinterest LinkedIn Tumblr

ಬೆಂಗಳೂರು: ತುಂಡುಡುಗೆ ತೊಟ್ಟು ವ್ಯಾಯಾಮ ಮಾಡುತ್ತಿದ್ದ ಸಂಯುಕ್ತಾ ವಿರುದ್ಧ ಅಲ್ಲಿಯೇ ಇದ್ದ ಮಹಿಳೆ ಹಾಗೂ ಕೆಲವು ಸ್ಥಳೀಯರು ಕಿಡಿಕಾರಿದ್ದರು. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಪಾರ್ಕ್​​ನಲ್ಲಿಯೇ ಲಾಕ್​ ಮಾಡಿದ್ದರು.ಸಂಯುಕ್ತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್​ ಬಂದು, ಪಾರ್ಕ್​ಗೆ ಬಂದಿದ್ದವರ ವಿರುದ್ಧ ಆರೋಪ ಮಾಡಿದ್ದರು. ನಂತರ ಟ್ವೀಟ್ ಮಾಡಿ, ಈಗ ಏನಾಗುತ್ತಿದೆಯೋ ಅದು ದೇಶದ ಭವಿಷ್ಯದ ಪ್ರತಿಬಿಂಬ. ನಮ್ಮನ್ನು ಕವಿತಾ ರೆಡ್ಡಿ ನಿಂದಿಸಿದ್ದಾರೆ ಹಾಗೂ ಅಪಹಾಸ್ಯ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

https://twitter.com/ShobhaBJP/status/1302112068565266432?s=20

ಈ ಘಟನೆಯ ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದು, ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಯುಕ್ತಾರಿಗೆ ಬೆಂಬಲ ಸೂಚಿಸಿದ್ದಾರೆ.ಸಂಯುಕ್ತಾ ಹೆಗ್ಡೆಯವರನ್ನು ಹೀಗೆಲ್ಲ ನಡೆಸಿಕೊಂಡಿದ್ದು ನಿಜಕ್ಕೂ ದುರದೃಷ್ಟಕರ. ಇಂಥ ನೈತಿಕ ಪೊಲೀಸ್​ಗಿರಿಗೆಲ್ಲ ಅವಕಾಶವಿಲ್ಲ. ಸಂಯುಕ್ತಾ ಮತ್ತು ಅವರ ಸ್ನೇಹಿತರನ್ನು ನಿಂದಿಸಿ, ಹಲ್ಲೆ ಮಾಡಿದ ಕವಿತಾ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿ, ಶಿಕ್ಷೆ ನೀಡಬೇಕು ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

Comments are closed.