ಬೆಂಗಳೂರು: ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ನಟಿ ರಾಗಿಣಿ ದ್ವಿವೇದಿ ಭಾನುವಾರ ಬೆಳಿಗ್ಗೆ ಅಲ್ಲಿನವರೊಂದಿಗೆ ರಂಪಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ತನಗೆ ಮನೆಯೂಟ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಇಲ್ಲಿನ ವ್ಯವಸ್ಥೆ ಸರಿ ಇಲ್ಲ, ಸೊಳ್ಳೆ ಜಾಸ್ತಿಯಿದೆ. ರಾತ್ರಿ ಮಲಗಿದರೆ ಸೊಳ್ಳೆ ಕಾಟ, ತಿಂಡಿ ವ್ಯವಸ್ಥೆ ಚೆನ್ನಾಗಿಲ್ಲ. ಪ್ರತಿದಿನ ಮನೆಯಿಂದ ಊಟದ ವ್ಯವಸ್ಥೆ ಮಾಡುವಂತೆ ಪೊಲೀಸರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶನಿವಾರ ಸಂಜೆ ವಿಚಾರಣೆ ವೇಳೆ ಸರಿಯಾಗಿ ರಾಗಿಣಿ ಸ್ಪಂದಿಸಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಡೈರಿ ಸರ್ಕಲ್‍ನ ಕಿದ್ವಾಯಿ ಆಸ್ಪತ್ರೆ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿಯನ್ನು ಶನಿವಾರ ಸಿಸಿಬಿ ವಿಚಾರಣೆ ಮಾಡಿಲ್ಲ. ನನಗೆ ಜ್ವರ, ಬೆನ್ನು ನೋವು ಎಂದು ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಗಿಣಿಯ ಮೆಡಿಕಲ್ ರಿಪೋರ್ಟ್ ಬಂದ ಬಳಿಕ ವಿಚಾರಣೆ ನಡೆಸಲಾಗುತ್ತದೆ.
Comments are closed.