ಕುಂದಾಪುರ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಗಾಂಜಾ, ಬೈಕು ಸಹಿತ ಮೂವರನ್ನು ಬಂಧಿಸಿದ್ದಾರೆ. ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಮಲ್ಲಣ್ಣನಹಿತ್ಲು ನಿವಾಸಿ ಮೊಹಮ್ಮದ್ ಸಫಾನ್(32), ಮಂಗಳೂರಿನ ಬಜ್ಪೆ ಪೆರ್ಮುದೆ ಗ್ರಾಮದ ತೆಂಕೆಕ್ಕಾರ್ ನಿವಾಸಿ ಅಬ್ದುಲ್ ರೆಹಮಾನ್ ಮಿಯಾಜ್(21) ಹಾಗೂ ಮೂಡುಗೋಪಾಡಿ ಗಾಂಧಿನಗರ 5 ಸೆಂಟ್ಸ್ ನಿವಾಸಿ ಮೊಹಮ್ಮದ್ ಅಮೀರ್ ಹುಸೇನ್(19) ಬ್ಂಧಿತ ಆರೋಪಿಗಳು.

ಶನಿವಾರದಂದು ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಬೀಜಾಡಿ-ವಕ್ವಾಡಿ ರಸ್ತೆಯಿಂದ ವಿನಾಯಕ ನಗರ ಕಡೆಗೆ ಹೋಗುವ ಮಣ್ಣು ರಸ್ತೆಯ ತಿರುವಿನಲ್ಲಿ ಮೂವರು ಯುವಕರು ಎರಡು ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಅಧಿಕೃತ ಮಾಹಿತಿಯಂತೆ ಕುಂದಾಪುರ ಪಿಎಸೈ ಸದಾಶಿವ ಆರ್ ಗವರೋಜಿ ಮತ್ತು ತಂಡ ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭ ಆರೋಪಿಗಳು ಮಾರಾಟಕ್ಕೆಂದು ತಂದಿದ್ದ
ಸುಮಾರು 6500 ರೂಪಾಯಿ ಮೌಲ್ಯದ 195 ಗ್ರಾಂ ಗಾಂಜಾ ಹಾಗೂ ಮಾರಾಟಕ್ಕೆ ಬಳಸಿದ್ದ ಮೂವತ್ತು ಸಾವಿರ ಮೌಲ್ಯದ ಎರಡು ದ್ವಿಚಕ್ರ ವಾಹನಗಳ ಸವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.