ಕರ್ನಾಟಕ

ಸಿಎಂ ಬಿಎಸ್‌ವೈ ಪುತ್ರ ಬಿ.ವೈ ವಿಜಯೇಂದ್ರ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ..!

Pinterest LinkedIn Tumblr

ಬೆಂಗಳೂರು: ಟ್ವಿಟ್ಟರ್‌ನಲ್ಲಿ ಸಿಎಂ ಬಿಎಸ್‌ವೈ ಅವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ ಸುಳ್ಳು ಮಾಹಿತಿ ರವಾನಿಸುತ್ತಿರುವವರ ವಿರುದ್ದ ಸೈಬರ್ ಕ್ರೈಮ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಎಸ್‌ವೈ ಅವರ ಪುತ್ರ, ದುರುದ್ದೇಶದಿಂದ ಟ್ವಿಟ್ಟರ್‌ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಸುಳ್ಳು ಮಾಹಿತಿ, ತಪ್ಪು ಸಂದೇಶ ರವಾನಿಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಇದರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದೆ. ಇಂತಹ ಕೀಳು ಪ್ರಯತ್ನಗಳ ವಿರುದ್ಧ ಎಲ್ಲರೂ ಎಚ್ಚರಿಕೆಯಿಂದಿರಬೇಕು ಎಂದಿದ್ದಾರೆ.

ಡ್ರಗ್ಸ್‌‌ ದಂಧೆಯ ಬಗ್ಗೆ ಟ್ವೀಟ್‌ ಮೂಲಕ ತಿಳಿಸಿರುವ ಅವರು, ಸಮಾಜಕ್ಕೆ ಮಾರಕವಾದ, ನಮ್ಮ ಯುವಜನತೆ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮಾದಕ ವ್ಯಸನದ ಕರಿನೆರಳು ಕನ್ನಡ ಚಿತ್ರರಂಗವನ್ನೂ ಆವರಿಸಿಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿರುವುದು ದುರ್ದೈವದ ಸಂಗತಿ. ಈ ಹೆಮ್ಮಾರಿ ಡ್ರಗ್ ಪಿಡುಗು ವಿದ್ಯಾಸಂಸ್ಥೆಗಳಿಗೂ ತನ್ನ ಕೆನ್ನಾಲಿಗೆ ಚಾಚಿನಿಂತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.

Comments are closed.