
ವಿಜಯಪುರ: ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಅವರ ಮೊಬೈಲ್ ಫೋನ್‌ನಿಂದ ಕೆಲವು ಅಶ್ಲೀಲ ಫೋಟೋಗಳು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಹರಿದಾಡಿ ಎಲ್ಲೆಡೆ ಅಲ್ಲೋಲ- ಕಲ್ಲೋಲ ಸೃಷ್ಟಿಯಾಗಿರುವ ಘಟನೆ ನಡೆದಿದೆ.
ಇವರ ಫೋನ್‌ನಿಂದ ಹರಿದಾಡಿದ ಫೋಟೋಗಳು ವಿಜಯಪುರ ಡಿಸಿಸಿ (ಪ್ರೆಸ್) ಗ್ರೂಪ್‍ಗೆ ಫಾರ್ವರ್ಡ್ ಆಗಿದೆ. ವಿಷಯ ತಿಳಿಯುತ್ತಲೇ ರವಿಗೌಡ ಪಾಟೀಲ ಅವರು ಸಾರ್ವಜನಿಕ ಕ್ಷಮೆ ಕೇಳಿದ್ದಾರೆ.
ನಿನ್ನೆ ರಾತ್ರಿ ಮನೆಯಲ್ಲಿ ಮುಖ ತೊಳೆಯಲು ಹೋಗಿದ್ದ ವೇಳೆ, ಚಿಕ್ಕ ಚಿಕ್ಕ ಮಕ್ಕಳು ಮೊಬೈಲ್ ತೆಗೆದುಕೊಂಡು ಆಟವಾಡುತ್ತಿದ್ದರು. ಆ ವೇಳೆ ಅವರಿಗೆ ಗೊತ್ತಾಗದೇ ಈ ರೀತಿ ಆಗಿರಬಹುದು. ಎಲ್ಲರ ಕ್ಷಮೆ ಕೋರುತ್ತೇನೆ ಎಂದು ಪಾಟೀಲರು ಸಮಜಾಯಿಷಿ ನೀಡುವ ಮೂಲಕ ಈ ವಿಷಯವನ್ನು ಇಲ್ಲಿಗೇ ನಿಲ್ಲಿಸುವಂತೆ ಹೇಳಿದ್ದಾರೆ.
ಆಗಿದ್ದೇನೆಂದರೆ, ನಿನ್ನೆ ರಾತ್ರಿ ಇವರ ಫೋನ್‌ನಿಂದ ವಾಟ್ಸ್‌ಆ್ಯಪ್ ಗ್ರುಪ್‌ಗೆ ಕೆಲವು ಅಶ್ಲೀಲ ಫೋಟೋಗಳು ಫಾರ್ವರ್ಡ್ ಆಗಿವೆ. ಇದನ್ನು ನೋಡಿದ್ದ ಗುಂಪಿನ ಕೆಲ ಸದಸ್ಯರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಪಾಟೀಲರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ.
ಈ ಅಸಭ್ಯ ಫೋಟೋಗಳನ್ನು ನೋಡಿ ಕೆಲ ಸದಸ್ಯರು ಗ್ರುಪ್‍ನಿಂದ ಎಕ್ಸಿಟ್ ಆದರು. ಇದನ್ನು ಗಮನಿಸಿದ ಗ್ರೂಪ್‌ನ ಅಡ್ಮಿನ್ ಆಗಿರುವ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ, ರವಿಗೌಡ ಪಾಟೀಲ ಅವರನ್ನು ಗ್ರುಪ್‍ನಿಂದ ಹೊರ ಹಾಕಿದ್ದಾರೆ. ನಂತರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆನಂತರವಷ್ಟೇ ಪೋಸ್ಟ್ ಡಿಲೀಟ್ ಮಾಡಲಾಗಿದೆ.
ಮಾರನೆಯ ದಿನ ಅಂದರೆ ಇಂದು ಬೆಳಗ್ಗೆ ಘಟನೆಯ ಕುರಿತು ರವಿಗೌಡ ಪಾಟೀಲ ಕ್ಷಮೆ ಕೋರಿದ್ದಾರೆ. ನನಗೆ ಇದರ ಬಗ್ಗೆ ತಿಳಿದಿಲ್ಲ. ಮಕ್ಕಳು ಅರಿಯದೇ ಮಾಡಿದ್ದಾರೆ ಕ್ಷಮಿಸಿ ಎಂದಿದ್ದಾರೆ.
ರಾತ್ರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕರೆ ಮಾಡಿ ಹೇಳಿದಾಗಲೇ ನನಗೆ ವಿಷಯ ಗೊತ್ತಾಗಿದೆ. ನನಗೆ ವಾಟ್ಸ್‌ಆ್ಯಪ್ ಬಗ್ಗೆ ಅಷ್ಟೆಲ್ಲಾ ಗೊತ್ತಿಲ್ಲ. ಈ ವಿಷಯ ತಿಳಿದ ನಂತರ ಬೇರೆಯವರಿಗೆ ನನ್ನ ಫೋನ್ ತೋರಿಸಿದೆ. ವಾಟ್ಸ್‌ಆ್ಯಪ್ ಕೆಳಗಡೆ ಪಿಕ್ಚರ್ ಬಂದಿದ್ದವು. ಅವುಗಳನ್ನು ಮೊಮ್ಮಕ್ಕಳು ಫಾರ್ವರ್ಡ್ ಮಾಡಿದ್ದಾರೆ” ಎಂದು ಹೇಳಿದ್ದಾರೆ. ಅಚಾತುರ್ಯದಿಂದ ನಡೆದ ಘಟನೆಗೆ ವಿಷಾದಿಸುವುದಾಗಿ ತಿಳಿಸಿದ್ದಾರೆ.
Comments are closed.