ಕರ್ನಾಟಕ

ಕೊರೋನಾದಿಂದ ಮಗ ಸಾವನ್ನಪ್ಪಿದ್ದನ್ನು ತಿಳಿದು ಮೃತಪಟ್ಟ ಅಮ್ಮ

Pinterest LinkedIn Tumblr


ರಾಯಚೂರು: ಪುತ್ರ ಕೋವಿಡ್‌ ಸೋಂಕಿನಿಂದ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಅವರ ತಾಯಿಯೂ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಯಚೂರಿನಲ್ಲಿ ನಡೆದಿದೆ.

ಹೈದರಾಬಾದ್‌ನಲ್ಲಿ ಚಿಕಿತ್ಸೆಪಡೆಯುತ್ತಿದ್ದ ಜಿಲ್ಲೆಯ ಮಾನ್ವಿ ತಾಲ್ಲೂಕು ಉಪನೋಂದಣಾಧಿಕಾರಿ ಶಕೀಲ್‌ ಅಹ್ಮದ್‌ (45 ವರ್ಷ) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ರಾಯಚೂರಿನ ಹಾಜಿ ಕಾಲೋನಿಯಲ್ಲಿದ್ದ ತಾಯಿ ರಜೀಯಾ ಸುಲ್ತಾನ (65 ವರ್ಷ) ಕೂಡಾ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಉಪನೋಂದಣಾಧಿಕಾರಿಯಾಗಿರುವ ಇವರ ಇನ್ನೋರ್ವ ಪುತ್ರನಿಗೆ ಕೂಡ, ಕೋವಿಡ್‌ ದೃಢಪಟ್ಟಿದ್ದರಿಂದ ಚಿಕಿತ್ಸೆಗಾಗಿ ಹೈದರಾಬಾದ್‌ನಲ್ಲಿಯೇ ದಾಖಲಾಗಿದ್ದಾರೆ.

Comments are closed.