ಕರ್ನಾಟಕ

ರಾಜ್ಯದಲ್ಲಿ ಇಂದು (ಶುಕ್ರವಾರ) 5007 ಕೊರೋನಾ ಪ್ರಕರಣಗಳು ಪತ್ತೆ: 110 ಬಲಿ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕೊರೋನಾ‌ ಪ್ರಕರಣಗಳು ಏರಿಮುಖವಾಗಿಯೇ ಸಾಗಿದ್ದು, ಮತ್ತೊಮ್ಮೆ 5 ಸಾವಿರದ ಗಡಿ ದಾಟಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಕೂಡ ಮತ್ತೆ ಶತಕ ದಾಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 85 ಸಾವಿರ ತಲುಪಿದೆ.

ಶುಕ್ರವಾರ ರಾಜ್ಯದಲ್ಲಿ 5007 ಪ್ರಕರಣಗಳು ವರದಿಯಾಗಿದ್ದು, 110 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 85,870ಕ್ಕೇರಿಕೆಯಾಗಿದೆ.

ಈ ನಡುವೆ, ದಿನವೊಂದರಲ್ಲಿ 2037 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 31347ಕ್ಕೇರಿದಂತಾಗಿದೆ. 1732 ಮಂದಿ ಸಾವನ್ನಪ್ಪಿದ್ದು, 52791 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 611 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರು ನಗರದಲ್ಲಿ 2267 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 41467ಕ್ಕೇರಿಕೆಯಾಗಿದೆ.

ಉಳಿದಂತೆ ಮೈಸೂರಿನಲ್ಲಿ 281, ಉಡುಪಿಯಲ್ಲಿ 190, ಬಾಗಲಕೋಟೆಯಲ್ಲಿ 184, ದಕ್ಷಿಣ ಕನ್ನಡದಲ್ಲಿ 180, ಧಾರವಾಡದಲ್ಲಿ 174, ಕಲಬುರಗಿಯಲ್ಲಿ 159, ವಿಜಯಪುರದಲ್ಲಿ 158,ಬಳ್ಳಾರಿಯಲ್ಲಿ 136, ಹಾಸನದಲ್ಲಿ 118, ಬೆಳಗಾವಿಯಲ್ಲಿ 116, ಗದಗದಲ್ಲಿ 108, ರಾಯಚೂರಿನಲ್ಲಿ 107, ಚಿಕ್ಕಬಳ್ಳಾಪುರದಲ್ಲಿ 92, ಉತ್ತರಕನ್ನಡದಲ್ಲಿ 88, ಬೀದರ್‌ನಲ್ಲಿ 87, ದಾವಣಗೆರೆಯಲ್ಲಿ 77 ಪ್ರಕರಣಗಳು ವರದಿಯಾಗಿವೆ.

ಶಿವಮೊಗ್ಗದಲ್ಲಿ 67, ತುಮಕೂರು, ಹಾವೇರಿಯಲ್ಲಿ ತಲಾ 59, ಮಂಡ್ಯದಲ್ಲಿ 57, ಯಾದಗಿರಿಯಲ್ಲಿ 53, ಕೊಪ್ಪಳದಲ್ಲಿ 39, ಕೋಲಾರದಲ್ಲಿ 36, ಚಾಮರಾಜನಗದಲ್ಲಿ 33, ಚಿಕ್ಕಮಗಳೂರಿನಲ್ಲಿ 28, ಬೆಂಗಳೂರು ಗ್ರಾಮಾಂತರದಲ್ಲಿ 26, ಚಿತ್ರದುರ್ಗದಲ್ಲಿ 13, ರಾಮನಗರದಲ್ಲಿ 12, ಕೊಡಗಿನಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್‌ ಪರೀಕ್ಷೆಗೆ ಸರ್ಕಾರ ಕ್ಷಿಪ್ರ ಆಂಟಿಜೆನ್‌ ಪರೀಕ್ಷೆಯನ್ನು ಅಳವಡಿಸಿಕೊಂಡಿದ್ದು ಶುಕ್ರವಾರ 7411 ಮಂದಿಯ ತಪಾಸಣೆ ನಡೆಸಲಾಗಿದೆ. ಇತರ ಮಾದರಿಗಳಲ್ಲಿ 22408 ಮಂದಿಯ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 11.10 ಲಕ್ಷ ಮಾದರಿಗಳ ತಪಾಸಣೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Comments are closed.