ನವದೆಹಲಿ: ದೇಶದ ಜನತೆಗೆ ಶುಕ್ರವಾರದಂದು ಶುಭ ಸುದ್ದಿಯೊಂದು ಸಿಕ್ಕಿದೆ. ಭಾರತದಲ್ಲಿ ತಯಾರಿಸಿದ ಕೊರೊನಾವೈರಸ್ ಲಸಿಕೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಔಷಧಿ ತಯಾರಕ ಕಂಪನಿ ಸಿಪ್ಲಾ ಕೋವಿಡ್ -19 ಚಿಕಿತ್ಸೆಗಾಗಿ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಅಭಿವೃದ್ಧಿಪಡಿಸಿದ ಫವಿಪಿರಾವೀರ್ ಎಂಬ ಔಷಧಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಭಾರತೀಯ ಔಷಧಿಯ ವಿಶೇಷತೆ ಎಂದರೆ ಅದು ಕರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಹಳ ಪ್ರಯೋಜನಕಾರಿ ಮತ್ತು ತುಂಬಾ ಅಗ್ಗದ ಔಷಧಿಯಾಗಿದೆ ಎಂದು ತಿಳಿದುಬಂದಿದೆ.
ಅಧಿಕೃತ ಹೇಳಿಕೆಯ ಪ್ರಕಾರ ಮೂಲತಃ ಜಪಾನ್‌ನ ಫ್ಯೂಜಿ ಫಾರ್ಮಾ ಅಭಿವೃದ್ಧಿಪಡಿಸಿದ ಫಾವಿಪಿರವಿರ್ ಪ್ರಾಯೋಗಿಕ ಪರೀಕ್ಷೆಗಳ ಸಮಯದಲ್ಲಿ ವಿಶೇಷವಾಗಿ ಕರೋನಾವೈರಸ್ (Coronavirus) ಕೋವಿಡ್ -19 ರ ಸೌಮ್ಯ ಮತ್ತು ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸಿದೆ. ಸಿಎಸ್ಐಆರ್ ಸ್ಥಳೀಯವಾಗಿ ಲಭ್ಯವಿರುವ ರಾಸಾಯನಿಕಗಳನ್ನು ಬಳಸಿ ಈ ಔಷಧಿಯನ್ನು ತಯಾರಿಸುವ ಅಗ್ಗದ ಪ್ರಕ್ರಿಯೆಯನ್ನು ಕಂಡುಹಿಡಿದು ಅದನ್ನು ಸಿಪ್ಲಾಗೆ ನೀಡಿತು.
ಸಿಪ್ಲಾ ಈ ಕೋವಿಡ್ -19 (Covid 19) ಔಷಧಿಯನ್ನು ತಯಾರಿಸಲು ಪ್ರಾರಂಭಿಸಿದೆ ಮತ್ತು ಔಷಧವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ (ಡಿಸಿಜಿಐ) ಯಿಂದ ಅನುಮತಿ ಕೋರಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಂಟ್ರೋಲರ್ ಜನರಲ್ ದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಫವಿಪಿರ್ವಿರ್ ಬಳಸಲು ಅನುಮತಿ ನೀಡಿದ್ದಾರೆ. ಕೋವಿಡ್ -19 ರೊಂದಿಗೆ ಹೋರಾಡುವ ರೋಗಿಗಳಿಗೆ ಸಹಾಯ ಮಾಡಲು ಸಿಪ್ಲಾ ಈಗ ಈ ಔಷಧಿಯನ್ನು ತರುತ್ತಿದೆ.
ಈ ನಿಟ್ಟಿನಲ್ಲಿ ಸಿಎಸ್‌ಐಆರ್-ಐಐಸಿಆರ್ ನಿರ್ದೇಶಕ ಎಸ್.ಕೆ. ಚಂದ್ರಶೇಖರ್ ತಂತ್ರಜ್ಞಾನವು ತುಂಬಾ ಅಗ್ಗವಾಗಿದೆ ಮತ್ತು ಪರಿಣಾಮಕಾರಿಯಾಗಿದೆ. ಈ ಸಹಾಯದಿಂದ ಸಿಪ್ಲಾ ಕಡಿಮೆ ಸಮಯದಲ್ಲಿ ಹೆಚ್ಚಿನ ಔಷಧಿಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
Comments are closed.