ಬೆಂಗಳೂರು: ವಿವಿಧ ದೇಶಗಳಿಂದ ಭಾರತೀಯ ಪ್ರಜೆಗಳನ್ನು ಮರಳಿ ಕರೆತರುವ ಉದ್ದೇಶದಿಂದ ಪ್ರಾರಂಭವಾದ “ವಂದೇ ಬಾರತ್ ಮಿಷನ್” ನಾಲ್ಕನೇ ಹಂತದಲ್ಲಿ 11,503 ಜನ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.. ಒಟ್ಟು 66 ವಿಮಾನಗಳು ಈ ಮಿಷನ್ ಅಡಿ ಕಾರ್ಯಾಚರಣೆ ನಡೆಸಲಿದೆ.
ಹೆಚ್ಚಿನ ವಿಮಾನಗಳು ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರುತ್ತಿದ್ದರೆ, ಕೊಲ್ಲಿ ರಾಷ್ಟ್ರಗಳಿಂದ ಕೆಲವು ವಿಮಾನಗಳು ಮಂಗಳೂರಿಗೆ ಆಗಮಿಸಲಿದೆ. ಈ ವಿಶೇಷ ವಿಮಾನಗಳನ್ನು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಂಪನಿಗಳು ನಿರ್ವಹಿಸಲಿದ್ದು ಗೋ ಏರ್ ಮತ್ತು ಇಂಡಿಗೊ ಚಿಪ್ಪಿಂಗ್ ಅನ್ನು ಹೊಂದಿದೆ.
ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನ ಪ್ರಕಾರ, ಜುಲೈ 4 ರಿಂದ ಪ್ರಾರಂಭವಾಗಿ ಆಗಸ್ಟ್ 1 ಕ್ಕೆನಾಲ್ಕನೇ ಹಂತದ ವಂದೇ ಬಾರತ್ ಮಿಷನ್ ಪೂರ್ಣವಾಗಲಿದೆ. ಇದರಲ್ಲಿ . ಹೆಚ್ಚಿನ ಪ್ರಯಾಣಿಕರು ಕೊಲ್ಲಿ ರಾಷ್ಟ್ರಗಳಿಂದ ಆಗಮಿಸಲಿದ್ದು ಆ ರಾಷ್ಟ್ರಗಳಿಂದ ಒಟ್ಟೂ 22 ವಿಮಾನಗಳ ಆಗಮನವಾಗಲಿದೆ. ದುಬೈ, ಶಾರ್ಜಾ, ಅಬುಧಾಬಿ, ದಮ್ಮಾಮ್ ಮತ್ತು ಜೆಡ್ಡಾದಿಂದ ಹೊರಟ ವಿವಿಧ ವಿಮಾನಗಳು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಇಳಿಯಲಿವೆ, ಇದಲ್ಲದೆ ಯುನೈಟೆಡ್ ಸ್ಟೇಟ್ಸ್‌ನಿಂದ 10, ಯುನೈಟೆಡ್ ಕಿಂಗ್‌ಡಂನಿಂದ ಎಂಟು, ದಕ್ಷಿಣ ಆಫ್ರಿಕಾ, ಸ್ವೀಡನ್, ಜಪಾನ್ ಮತ್ತು ಮಲೇಷ್ಯಾದಿಂದ ತಲಾ ಒಂದು, ಸಿಂಗಾಪುರ ಮತ್ತು ಜರ್ಮನಿಯಿಂದ ತಲಾ ಎರಡು ಮತ್ತು ಕೆನಡಾದಿಂದ ಮೂರು ವಿಮಾನಗಳು ಆಗಮಿಸಲಿದೆ.
ಯುಎಸ್ ನಿಂದ ಬೆಂಗಳೂರಿಗೆ ಆಗಮಿಸುವ ಎಲ್ಲಾ ವಿಮಾನಗಳು ನವದೆಹಲಿಯ ಮಾರ್ಗವಾಗಿ ಬರಲಿದೆ. ಯುಕೆ ನಿಂದ ಮುಂಬೈ ಅಥವಾ ನವದೆಹಲಿ ಮೂಲಕ ಬರಲಿವೆ. ಪ್ರಸ್ತಾವಿತ 66 ವಿಮಾನಗಳಲ್ಲಿ ಮೂರನೇ ಒಂದು ಭಾಗ ಇನ್ನೂ ಕರ್ನಾಟಕಕ್ಕೆ ಬರಬೇಕಿದೆ. ಇದು ತಾತ್ಕಾಲಿಕ ವೇಳಾಪಟ್ಟಿ ಮತ್ತು ಬೇಡಿಕೆಯ ಆಧಾರದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ ಎಂದು ತಿಳಿದುಬಂದಿದೆ.
Comments are closed.