ಕರ್ನಾಟಕ

ರಾಜ್ಯದಲ್ಲಿ ಇಂದು(ಶನಿವಾರ) 308 ಕೊರೋನಾ ಕೇಸ್​​ ಪತ್ತೆ, ಮೂವರು ಸಾವು

Pinterest LinkedIn Tumblr


ಬೆಂಗಳೂರು(ಜೂ.13): ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್​​​ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 308 ಮಂದಿಗೆ ಹೊಸದಾಗಿ ಕೋವಿಡ್​​-19 ಸೋಂಕು ಪತ್ತೆಯಾಗಿದೆ. ಇದರ ಪರಿಣಾಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ಇನ್ನು, ರಾಜ್ಯ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಒಟ್ಟು 6,824 ಪ್ರಕರಣಗಳ ಪೈಕಿ 3,648 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ 3,092 ಸಕ್ರಿಯ ಕೇಸುಗಳಿವೆ. ಇವರಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ.

ಮಾರಕ ಕೊರೋನಾ ವೈರಸ್​​ ಮರಣಮೃದಂಗವೂ ಮುಂದುವರಿದಿದೆ. ಹೀಗಾಗಿಯೇ ಈ ಸೋಂಕಿಗೆ ಇಂದು ಮತ್ತೆ ಮೂವರು ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.

Comments are closed.