ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರಬಹುದು ಆದರೆ, ಪರಿಸ್ಥಿತಿ ನಿಯಂತ್ರಣ ತಪ್ಪಿಲ್ಲ ಎಂದು ರಾಜ್ಯದಲ್ಲಿರುವ ಕೊರೋನಾ ಪರಿಸ್ಥಿತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರಂಭಿಕ ದಿನದಲ್ಲಿ ರಾಜ್ಯ ಕೊರೋನಾ ವಿರುದ್ಧ ಉತ್ತಮವಾಗಿಯೇ ಹೋರಾಟ ಮಾಡಿದ್ದರೂ, ಇತ್ತೀಚಿನ ಸೋಂಕಿನ ಪ್ರಕರಣಗಳನ್ನು ಗಮನಿಸಿದರೆ, ಹೋರಾಟದಲ್ಲಿ ಹಿನ್ನಡೆ ಸಾಧಿಸುತ್ತಿರುವ ಅನುಮಾನಗಳು ಮೂಡತೊಡಗಿವೆ. ಏಕೆಂದರೆ, ರಾಜ್ಯದಲ್ಲಿ ಪ್ರತೀ 10 ದಿನಗಳಲ್ಲಿ ಬರೋಬ್ಬರು 2,653ರಷ್ಟು ಸೋಂಕಿತರ ಸಂಖ್ಯೆ ಏರುತ್ತಲೇ ಇದೆ,
ಆದರೆ, ಈ ಬಗ್ಗೆ ತಜ್ಞರು ಸಮರ್ಥನೆ ನೀಡುತ್ತಿದ್ದು, ರಾಜ್ಯದಲ್ಲಿನ ಪ್ರಸ್ತುತದ ಪರಿಸ್ಥಿತಿ ನಿಯಂತ್ರಣ ತಪ್ಪಿದೆ ಎಂದೂ ಕೂಡ ಹೇಳಲಾಗದೂ, ಹಾಗೆಂದು ಚಿಂತೆಪಡುವ ಅಗತ್ಯವಿಲ್ಲ ಎಂದೂ ಕೂಡ ಹೇಳಲಾಗದು ಎಂದಿದ್ದಾರೆ.
ದೇಶದಲ್ಲಿನ ಸಾವಿನ 2.79 ಶೇಕಡಾವಾರಿಗೆ ಹೋಲಿಕೆ ಮಾಡಿದರೆ, ಪ್ರಸ್ತುತ ರಾಜ್ಯದಲ್ಲಿ ಸಾವಿನ ಶೇಕಡಾವಾರು 1.17ರಷ್ಟಿದೆ. ಮಹಾರಾಷ್ಟ್ರದಲ್ಲಿ ಸೇ.3.48, ತಮಿಳುನಾಡಿನಲ್ಲಿ 0.80ರಷ್ಟಿದೆ. ಪ್ರಸ್ತುತ ರಾಜ್ಯದಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲಿಯೇ ಹೆಚ್ಚು ಸೋಂಕು ಪತ್ತೆಯಾಗಿರುವುದು, ಇದೀಗ ರಾಜ್ಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ನಾವು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು, ವ್ಯವಸ್ಥೆಗಳನ್ನು ಮಾಡಿದ್ದೇವೆ. ರಾಜ್ಯದಲ್ಲಿ ಲಕ್ಷಣ ರಹಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಂತಹವರಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ. ಉಸಿರಾಟ ಸಮಸ್ಯೆ ಇರುವವರು, ವೆಂಟಿಲೇಟರ್ ಸಪೋರ್ಟ್ ನಲ್ಲಿರುವವರ ಸಂಖ್ಯೆ ತೀರಾ ಕಡಿಮೆಯಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜವೈದ್ ಅಖ್ತರ್ ಅವರು ಹೇಳಿದ್ದಾರೆ.
ಮುಂಬೈ, ದೆಹಲಿ ಹಾಗೂ ಇತರೆ ನಗರಗಳಿಂದ ಬರುವ ಲಕ್ಷಣರಹಿತ ರೋಗಿಗಳನ್ನು ಮನೆಗಳಲ್ಲಿಯೇ ಐಸೋಲೇಷನ್ ನಲ್ಲಿರಿಸುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಇದೂ ಕೂಡ ಒಂದು ಆಯ್ಕೆಯಾಗಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಸ್ಥಳೀಯ ಸೋಂಕು ಪ್ರಕರಣ ಕಡಿಮೆಯೇ ಇದೆ. ಶೇ.80-85ರಷ್ಟು ಸೋಂಕು ಪ್ರಕರಣ ಹೆಚ್ಚಾದರೂ ಕೂಡ ಜನರು ಭೀತಿಗೊಳಗಾಗಬಾರದು ಏಕೆಂದರೆ, ಬಹುತೇಕ ಪ್ರಕರಣ ಅಲ್ಪ ಹಾಗೂ ಲಕ್ಷಣ ರಹಿತ ಪ್ರಕರಗಳೇ ಆಗಿವೆ. ಬಹುತೇಕ ಸೋಂಕಿತರು ಯುವಕರೇ ಆಗಿದ್ದು, ಶೀಘ್ರಗತಿಯಲ್ಲಿ ಗುಣಮುಖರಾಗುತ್ತಾರೆಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಉಪ ಕುಲಪತಿ ಡಾ.ಎಸ್.ಸಚಿದಾನಂದ ಅವರು ಹೇಳಿದ್ದಾರೆ.
Comments are closed.