ಕರ್ನಾಟಕ

ಅಪ್ಪನಿಗಾಗಿ ಕಾಯುತ್ತಿದ್ದ ಮೂವರು ಹೆಣ್ಣುಮಕ್ಕಳಿಗೆ ಸಾವಿನ ಆಘಾತ, ವಿಡಿಯೋದಲ್ಲೇ ಅಂತಿಮ ದರ್ಶನ!

Pinterest LinkedIn Tumblr


ಬಳ್ಳಾರಿ: ತನ್ನ ತಾಯಿಯ ಕುಶಲೋಪರಿ ವಿಚಾರಿಸಲು ತವರು ರಾಜ್ಯ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ತಂದೆ, ಲಾಕ್‌ಡೌನ್‌ ವೇಳೆ ಮಕ್ಕಳನ್ನು ಮರಳಿ ಸೇರಲಾಗದೇ ಸಾವಿನ ವಾರ್ತೆಯ ಮೂಲಕ ಬೆಚ್ಚಿಬೀಳಿಸಿರುವ ಘಟನೆ, ಸಮೀಪದ ತಾಯನಕಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಅಬ್ದುಲ್‌ ಹಲೀಂ ಮೃತರು. ಅವರು ಮೂಲತಃ ಪಶ್ಚಿಮ ಬಂಗಾಳದ ಮಧುಪುರ ಗುಲ್ಡ್‌ ಬಾ ಗ್ರಾಮದವರು. ಕೂಲಿ ಅರಸಿ, ಹಲೀಂ ಅವರ ಕುಟುಂಬ 10 ವರ್ಷಗಳ ಹಿಂದೆಯೇ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಗೆ ಬಂದು, ಇಲ್ಲಿನ ಬಾಡಿಗೆ ಮನೆಯಲ್ಲಿ ನೆಲೆಪಡೆದಿದೆ. ಸುತ್ತಲಿನ ಊರುಗಳಲ್ಲಿ ಗಾರೆ ಕೆಲಸ ನಿರ್ವಹಿಸಿ, ಕುಟುಂಬ ಹೊಟ್ಟೆ ಹೊರೆಯುತ್ತಿದೆ.

ಫೆಬ್ರುವರಿಯಲ್ಲಿ ತನ್ನ ತಾಯಿಯನ್ನು ನೋಡಲೆಂದು ಅಬ್ದುಲ್‌ ಹಲೀಂ ಅವರು, ಪತ್ನಿ ಪರ್ಷಿಯಾ ಜತೆಗೂಡಿ ತವರು ರಾಜ್ಯಕ್ಕೆ ತೆರಳಿದ್ದರು. ನಂತರ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಕರ್ನಾಟಕಕ್ಕೆ ಮರಳಲಾಗದೇ ಪರಿತಪಿಸುತ್ತಿದ್ದರು. ಅವರ ಮೂವರು ಹೆಣ್ಣುಮಕ್ಕಳು, ತಾಯಕನಹಳ್ಳಿ ಗ್ರಾಮದ ಗನಿಸಾಬ್‌ ಅವರ ಮನೆಯಲ್ಲೇ ಆಸರೆಪಡೆದಿದ್ದಾರೆ. ವಾರದ ಹಿಂದೆ ಅಬ್ದುಲ್‌ ಹಲೀಂ, ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಕೇಳಿದ ಮೂವರು ಹೆಣ್ಣುಮಕ್ಕಳು, ವಿಡಿಯೊ ಕಾಲ್‌ನಲ್ಲೇ ತಂದೆಯ ಅಂತಿಮ ದರ್ಶನ ಪಡೆದಿದ್ದಾರೆ. ತಂದೆಯ ಬರುವಿಕೆಯ ಹಾದಿಯನ್ನೇ ಕಾಯುತ್ತಿದ್ದ ಮಕ್ಕಳು, ಸಾವಿನ ವಾರ್ತೆಯಿಂದ ಕಂಗೆಟ್ಟಿದ್ದು, ಸುರಕ್ಷಿತವಾಗಿ ತವರು ರಾಜ್ಯ ಸೇರಲು ಕಾತರರಾಗಿದ್ದಾರೆ.

Comments are closed.