ಕರ್ನಾಟಕ

ಮೇ 4 ರಿಂದ ಮದ್ಯ ಮಾರಾಟಕ್ಕೆ ಗ್ರೀನ್‌ ಸಿಗ್ನಲ್‌

Pinterest LinkedIn Tumblr


ಬೆಂಗಳೂರು: ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್‌ 3.0 ಜಾರಿಗೆ ಬಂದಿದೆ. ಆದರೆ ಮದ್ಯ ಸೇವಿಸುವವರಿಗೆ ತುಸು ಸಮಾಧಾನವನ್ನು ಸರಕಾರ ಕೊಟ್ಟಿದೆ. ಮೇ 4 ರಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹಸಿರು ವಲಯದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಆದರೆ ಬಾರ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಹಲವಾರು ಷರತ್ತುಗಳನ್ನು ವಿಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಬಾರ್‌ಗಳ ಮುಂದೆ ಐದು ಜನಕ್ಕಿಂತ ಹೆಚ್ಚು ಜನರು ನಿಲ್ಲುವಂತಿಲ್ಲ. ಆರು ಅಡಿ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು.

ಈ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಡಳಿತಗಳಿಗೆ ವಹಿಸಲಾಗಿದೆ.

ಹಸಿರು ವಲಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಾನ್‌ ಶಾಪ್‌ಗಳೂ ಓಪನ್‌ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಮದ್ಯ ಮಾರಾಟ ವಿಷಯ ಕುರಿತ ನಿರ್ಧಾರವನ್ನು ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಆಧರಿಸಿ ಕೈಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಎಚ್‌ ನಾಗೇಶ್‌ ತಿಳಿಸಿದ್ದಾರೆ.

Comments are closed.