ಕರ್ನಾಟಕ

ಲಾಕ್ ಡೌನ್ ನಿಂದಾಗಿ ಇತರ ಕಾಯಿಲೆಗಳ ಸಂಖ್ಯೆಯಲ್ಲಿ ತೀವ್ರ ಕುಸಿತ!

Pinterest LinkedIn Tumblr


ಬೆಂಗಳೂರು:ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ಬೇಸಿಗೆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಲರಾ, ಟೈಫಾಯ್ಡು ನಂತಹ ಜ್ವರಗಳು, ಕಣ್ಣಿನ ತೊಂದರೆಗಳ ಸಂಖ್ಯೆಯಲ್ಲಿ ತೀವ್ರ ರೀತಿಯಲ್ಲಿ ಕುಸಿತವಾಗಿದೆ. ಮನೆಯಲ್ಲಿಯೇ ಇರುವ ಜನರು, ಬೇಯಿಸಿದ ಶುಚಿ ರುಚಿಯಾದ ಆಹಾರವನ್ನು ಸೇವಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಅದೃಷ್ಟವಶಾತ್ ಎಂಬಂತೆ ಬೇಸಿಗೆ ಸಂಬಂಧಿತ ಬಹುತೇಕ ಕಾಯಿಲೆಗಳ ಸಂಖ್ಯೆ ಇಳಿಕೆಯಾಗಿದೆ. ಆಹಾರ ಮತ್ತು ನೀರಿನಿಂದ ಹರಡುತ್ತಿದ್ದ ಕಾಯಿಲೆಗಳ ಸಂಖ್ಯೆ ಇಳಿಕೆಯಾಗಿದೆ.ಲಾಕ್ ಡೌನ್ ಜಾರಿಯಲ್ಲಿದ್ದು, ಜನರು ಮನೆಯಲ್ಲಿಯೇ ಸಿದ್ಧಪಡಿಸಿದ ಆಹಾರ ಸೇವಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರಾದ ಡಾ. ರೆಶು ಅಗರ್ ವಾಲ್ ಹೇಳುತ್ತಾರೆ.

ಮನೆಯಲ್ಲಿಯೇ ಬೇಯಿಸಿದ ಶುಚಿ ರುಚಿಯಾದ ಆಹಾರ ಸೇವನೆಯಿಂದ ಉದರ ಸೋಂಕು, ಪುಡ್ ಪಾಯಿಸನ್ ಪ್ರಕರಣಗಳ ಸಂಖ್ಯೆ ಕಂಡುಬರುತ್ತಿಲ್ಲ, ಚರ್ಮಕ್ಕೆ ಸಂಬಂಧಿತ ಆಲರ್ಜಿಗಳು ಉಂಟಾಗುತ್ತಿಲ್ಲ, ಬಹುತೇಕ ಜನರು ಮಾಂಸಾಹಾರಿ ತ್ಯಜಿಸಿ, ಕಡಿಮೆ ಎಣ್ಣೆ ಉಪಯೋಗಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದಾಗ್ಯೂ, ಲಾಕ್ ಡೌನ್ ನಿಂದ 24 ಗಂಟೆಯೂ ಜನರು ಮನೆಯ ಒಳಗಡೆ ಇರುವುದರಿಂದ ಒತ್ತಡ, ಖಿನ್ನತೆ, ಆತಂಕದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಮಾತುಗಳು ಕೇಳಿದ್ದೇನೆ. ಅಂತಹವರು ಸಮತೋಲಿತ ಆಹಾರ ಸೇವಿಸಿ ಎಂದು ಸಲಹೆ ಮಾಡುವುದಾಗಿ ತಿಳಿಸಿದ್ದಾರೆ.

ಲಾಕ್ ಡೌನ್ ನಿಂದ ಕೋವಿಡ್-19 ಸೋಂಕು ಹರಡುವುದು ಕಡಿಮೆಯಾಗಿದೆ, ಅಲ್ಲದೇ, ಕಾಲರಾ, ಟೈಪಾಡ್ ನಂತಹ ನೀರಿನಿಂದ ಹರಡುವ ಕಾಯಿಲೆಗಳನ್ನು ತಡೆಗಟ್ಟುತ್ತಿದೆ. ಉತ್ತಮ ಆಹಾರ ಸೇವನೆ ಹಾಗೂ ಶುಚಿಯಾದ ನೀರು ಸೇವೆನೆಯಂದ ಇಂತಹ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ ಎಂದು ಪೋರ್ಟಿಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ನಿರ್ದೇಶಕರಾದ ಡಾ. ಶೈಲಾ ಚಕ್ರವರ್ತಿ ಸಲಹೆ ನೀಡಿದ್ದಾರೆ.

ಮಕ್ಕಳು ಮನೆಯಿಂದ ಹೊರಗೆ ಹೋಗಿ ಆಟವಾಡುತ್ತಿಲ್ಲ. ಇದರಿಂದಾಗಿ ಗಾಳಿ ಮೂಲಕ ಹರಡಬಲ್ಲ ಕಾಯಿಲೆಗಳು ಕಡಿಮೆಯಾಗಿವೆ. ಆದಾಗ್ಯೂ, ಮನೆಯಲ್ಲಿ ಇದ್ದು, ಜಂಕ್ ಪುಡ್ ಆಹಾರ ಸೇವನೆಯಿಂದ ಉದರ ಸೋಂಕಿನ ಸಮಸ್ಯೆ ಉಂಟಾಗಬಹುದು ಎಂದು ರೈನ್ ಬೊ ಮಕ್ಕಳ ಆಸ್ಪತ್ರೆಯ ಉಪಾಧ್ಯಕ್ಷ ನೀರಾಜ್ ಲಾಲ್ ಹೇಳಿದ್ದಾರೆ.

Comments are closed.