ಬೆಂಗಳೂರು (ಏ.26): ಇಂದು ತೃತೀಯ. ಲಾಕ್ಡೌನ್ ಇರುವ ಕಾರಣ ಚಿನ್ನವನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಕೆಲ ಚಿನ್ನದ ಸಂಸ್ಥೆಗಳು ಮುಂದೆ ಬಂದಿವೆ. ಈ ಮಧ್ಯೆ ಚಿನ್ನ ಖರೀದಿ ದಾರರಿಗೆ ಶಾಕ್ ಉಂಟಾಗಿದೆ. ಕೇವಲ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಎರಡುವರೆ ಸಾವಿರ ರೂಪಾಯಿ ಏರಿಕೆ ಕಂಡಿದೆ.
ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 110 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 42,170 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 110 ರೂಪಾಯಿ ಏರಿಕೆ ಕಂಡಿದ್ದು, 45,290 ರೂಪಾಯಿ ಆಗಿದೆ. ಈ ಮೂಲಕ ಸತತ 4ನೇ ದಿನವೂ ಚಿನ್ನ ಏರಿಕೆ ಕಂಡಿದೆ.
ಏಪ್ರಿಲ್ 22ರಂದು 10 ಗ್ರಾಂ ಚಿನ್ನಕ್ಕೆ 760 ರೂ., ಏಪ್ರಿಲ್ 23ರಂದು 740 ರೂ., ಏಪ್ರಿಲ್ 24ರಂದು 910 ರೂ., ಏಪ್ರಿಲ್ 24ರಂದು 110 ರೂ. ಏರಿಕೆ ಕಂಡಿದ್ದು ಈ ಮೂಲಕ ಚಿನ್ನದ ಬೆಲೆ ಒಟ್ಟು 2,520 ರೂಪಾಯಿ ಏರಿಕೆ ಕಂಡಂತಾಗಿದೆ.
ಬೆಳ್ಳಿ ಬೆಲೆ ಕೂಡ ಏರಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿಗೆ 60 ರೂಪಾಯಿ ಏರಿಕೆ ಕಾಣುವ ಮೂಲಕ 42,590 ರೂಪಾಯಿ ಆಗಿದೆ.
ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ.
Comments are closed.