ರಾಷ್ಟ್ರೀಯ

ಉತ್ತರ ಕೊರಿಯಾ ಅಧ್ಯಕ್ಷ ಕಿಮ್​ ಜಾಂಗ್​ ಉನ್​ ಮೃತಪಟ್ಟಿದ್ದಾರೆ; ಚೀನಾ ಮಾಧ್ಯಮಗಳು

Pinterest LinkedIn Tumblr


ನವದೆಹಲಿ (ಏ.26): ಉತ್ತರ ಕೊರಿಯಾ ಅಧ್ಯಕ್ಷ ಕಿಮ್​ ಜಾಂಗ್​ ಉನ್​ ಹೃದಯ ಶಸ್ತ್ರಚಿಕಿತ್ಸೆ ಬಳಿಕ ಮೃತಪಟ್ಟಿದ್ದಾರೆ ಎಂದು ಜಪಾನ್​ ಹಾಗೂ ಚೀನಾ ಮಾಧ್ಯಮಗಳು ವರದಿಮಾಡಿವೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಇತ್ತೀಚೆಗೆ ಅಮೆರಿಕ ಗುಪ್ತಚರ ಇಲಾಖೆ ಹೇಳಿತ್ತು.

ಕಿಮ್ II ಸಂಗ್​ ಉತ್ತರ ಕೊರಿಯಾ ಪಿತಾಮಹ ಮತ್ತು ಕಿಮ್​ ಜಾಂಗ್​ ಉನ್​ ಅವರ ತಾತ. ಏ.15ರಂದು ಅವರ ಜನ್ಮದಿನ. ಹೀಗಾಗಿ ಇಡೀ ದೇಶಕ್ಕೆ ಸರ್ಕಾರಿ ರಜೆ. ಅಂದು ನಡೆದ ಅಜ್ಜನ ಜನ್ಮದಿನ ಆಚರಣೆಯಲ್ಲಿ ಕಿಮ್​ ಜಾಂಗ್​ ಉನ್​ ಪಾಲ್ಗೊಂಡಿರಲಿಲ್ಲ. ಹೀಗಾಗಿ, ಕಿಮ್​ ಆರೋಗ್ಯದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ದವು.

ಈ ಮಧ್ಯೆ ಕೆಲ ಚೀನಾ ಮಾಧ್ಯಮಗಳು ಕಿಮ್​ ಆರೋಗ್ಯದ ಬಗ್ಗೆ ಸಾಲು ಸಾಲು ವರದಿ ಪ್ರಕಟಿಸುತ್ತಿವೆ. ಚೀನಾ ಮಾಧ್ಯಮಗಳ ಪ್ರಕಾರ ಈಗಾಗಲೇ ಕಿಮ್​ ಜಾಂಗ್​ ಕೊನೆ ಉಸಿರೆಳೆದಿದ್ದಾರಂತೆ. “ಕಿಮ್​ ಜಾಂಗ್​ ಉನ್​ ಇತ್ತೀಚೆಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಇದು ಯಶಸ್ವಿಯಾಗಿಲ್ಲ. ಈಗಾಗಲೇ ಅವರು ಮೃತಪಟ್ಟಿದ್ದಾರೆ. ಇಲ್ಲವೇ ಕಿಮ್​ ಮತ್ತೆ ಚೇತರಿಕೆ ಕಾಣದ ಸ್ಥಿತಿ ತಲುಪಿದ್ದಾರೆ,” ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಶಸ್ತ್ರ ಚಿಕಿತ್ಸೆ ಮಾಡುವಾಗ ವೈದ್ಯರು ತೀವ್ರ ನಿರ್ಲಕ್ಷ್ಯ ತೋರಿದ್ದರಂತೆ. ಕೆಲ ವರದಿಗಳ ಪ್ರಕಾರ ಶಸ್ತ್ರಚಕಿತ್ಸೆ ವೇಳೆ ವೈದ್ಯರ ಕೈ ನಡುಗುತ್ತಿತ್ತಂತೆ. ಇದು ಕೂಡ ಶಸ್ತ್ರಚಿಕಿತ್ಸೆ ವಿಫಲವಾಗಲು ಕಾರಣ ಎನ್ನಲಾಗಿದೆ.

ಇನ್ನು, ಅಂತಾರಾಷ್ಟ್ರೀಯ ಮಾಧ್ಯಮಗಳು ಕಿಮ್​ ಸಾವಿನ ಸುದ್ದಿಯನ್ನು ಅಲ್ಲಗಳೆದಿವೆ. ಕಿಮ್​ ಜಾನ್​ ಅನಾರೋಗ್ಯದಲ್ಲಿ ಏರು ಪೇರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರವೇ ಅವರು ಆಡಳಿತದ ಕಾರ್ಯದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಹೇಳಿವೆ.

2014ರಲ್ಲಿ ಒಂದು ತಿಂಗಳು ಕಿಮ್​ ಜಾಂಗ್​ ಉನ್​ ಕಾಣೆಯಾಗಿದ್ದರು. ನಂತರ ತಿಳಿದು ಬಂದಿದ್ದೇನೆಂದರೆ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರಂತೆ. ಆದರೆ, ಈ ಬಗ್ಗೆ ಯಾರೊಬ್ಬರೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಉತ್ತರ ಕೊರಿಯಾದಿಂದ ಮಾಹಿತಿ ಕಲೆ ಹಾಕುವುದು ಮಾಧ್ಯಮ ಹಾಗೂ ಗುಪ್ತಚರ ಇಲಾಖೆಗೆ ಇರುವ ದೊಡ್ಡ ಸವಾಲು. ಏಕೆಂದರೆ ಇಲ್ಲಿನ ನಾಯಕರನ್ನು ಜನರು ದೇವರಂತೆ ಕಾಣುತ್ತಾರೆ. ಹೀಗಾಗಿ ಜನರು ಹಾಗೂ ಅಧಿಕಾರಿಗಳು ಯಾವುದೇ ಮಾಹಿತಿ ಹೊರ ಹೋಗದಂತೆ ನೋಡಿಕೊಳ್ಳುತ್ತಾರೆ.

Comments are closed.