ನವದೆಹಲಿ: ಕೊರೊನಾ ವೈರಸ್ ಅನ್ನು ಸೋಲಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಖ್ಯಾತ ಬಾಲಿವುಡ್ ಸಿಂಗರ್ ಕನಿಕಾ ಕಪೂರ್ ಮೊದಲ ಬಾರಿಗೆ ತಮ್ಮ ಮೇಲೆ ಮಾಡಲಾಗಿರುವ ತರಹೇವಾರಿ ಆರೋಪಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿರುವ ಕನಿಕಾ ಕಪೂರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ತಾವು ಬರೆದಿರುವ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಕನಿಕಾ, ” ನಾನು ಲಂಡನ್ ನಿಂದ ಮುಂಬೈಗೆ ಬಂದಿಳಿದಾಗ ನನಗೆ ಕ್ವಾರಂಟೀನ್ ಆಗಲು ಯಾವುದೇ ನಿರ್ದೇಶನಗಳನ್ನು ನೀಡಲಾಗಿರಲಿಲ್ಲ. ಬಳಿಕ ನಾನು ಮುಂಬೈನಿಂದ ಲಖನೌಗೆ ಬಂದಿಳಿದಾಗಲೂ ಕೂಡ ನನ್ನಲ್ಲಿ ಯಾವುದೇ ಕೊವಿಡ್-19 ಲಕ್ಷಣಗಳು ಇರಲಿಲ್ಲ” ಎಂದಿದ್ದಾಳೆ.
ಅಷ್ಟೇ ಅಲ್ಲ ತಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಇದೇ ಒಂದು ಕಾರಣದಿಂದ ತಾವು ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಆದರೆ, ಇವುಗಳಲ್ಲಿ ಯಾವುದೇ ಔತಣಕೂಟವನ್ನು ತಾವು ಆಯೋಜಿಸಿರಲಿಲ್ಲ. ಮಾರ್ಚ್ 17ನೇ ತಾರೀಖಿಗೆ ತಮಗೆ ಶಂಕೆ ಬಂದ ಕಾರಣ ತಾನು ಖುದ್ದಾಗಿ ಟೆಸ್ಟ್ ಮಾಡಿಸಲು ಮುಂದಾಗಿರುವುದಾಗಿ ಕನಿಕಾ ಹೇಳಿದ್ದಾರೆ. ಟೆಸ್ಟ್ ಪಾಸಿಟಿವ್ ಬಂದ ಕಾರಣ ಆಸ್ಪತ್ರೆಗೆ ದಾಖಲಾದೆ ಎಂದು ಕನಿಕಾ ಹೇಳಿದ್ದಾರೆ.
Comments are closed.