ಮನೋರಂಜನೆ

ವಿಡಿಯೋ ಕಾನ್ಫರೆನ್ಸ್​ ಮೂಲಕ ತಾಯಿಯ ಅಂತ್ಯ ಸಂಸ್ಕಾರ ವೀಕ್ಷಿಸಿದ ಬಾಲಿವುಡ್​ ನಟ!

Pinterest LinkedIn Tumblr


ಬಾಲಿವುಡ್​ ಖ್ಯಾತ ನಟ ಇರ್ಫಾನ್​​ ಖಾನ್​ ಅವರ ತಾಯಿ ಸಯೀದಾ ಬೇಗಂ ಶನಿವಾರದಂದು ವಿಧಿವಶರಾಗಿದ್ದಾರೆ. ಲಾಕ್​​​ಡೌನ್​ನಿಂದಾಗಿ ಮುಂಬೈನಲ್ಲಿ ಉಳಿದುಕೊಂಡಿರುವ ಇರ್ಫಾನ್​ ತಾಯಿಯ ಅಂತ್ಯ ಸಂಸ್ಕಾರಕ್ಕೆ ತೆರಳದೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

95 ವರ್ಷದ ಸಯೀದಾ ಬೇಗಂ ರಾಜಸ್ತಾನದ ಜೈಪುರದಲ್ಲಿರುವ ಸ್ವಗೃಹದಲ್ಲಿ ಸಾವನ್ನಪ್ಪಿದ್ದರು. ಇತ್ತ ನಟ ಇರ್ಫಾನ್ ಮುಂಬೈ ಮನೆಯಲ್ಲಿ ಇದ್ದರು, ಕೊರೋನಾ ಲಾಕ್​ಡೌನ್​​​ನಿಂದಾ ಜೈಪುರಕ್ಕೆ ತೆರಳಲಾಗದೆ ವಿಡಿಯೋ ಕರೆಯ ಮೂಲಕ ತಾಯಿಯ ಅಂತ್ಯ ಸಂಸ್ಕಾರ ವೀಕ್ಷಿಸಿದ್ದಾರೆ.

ಇರ್ಫಾನ್​ ತಾಯಿ ಕಳೆದ ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ ಬೆಳಗ್ಗೆ 5 ಗಂಟೆಗೆ ಮೃತಪಟ್ಟಿದ್ದಾರೆ. ಲಾಕ್​ಡೌನ್​ನಿಂದಾಗಿ ಸಯೀದಾ ಬೇಗಂ ಅಂತ್ಯಕ್ರಿಯೆಯಲ್ಲಿ ಕೆಲವರು ಮಾತ್ರ ಭಾಗಿಯಾಗಿದ್ದರು. ಜೈಪುರದ ಚುಂಗಿ ನಾಕಾ ರುದ್ರ ಭೂಮಿಯಲ್ಲಿ ಅಂತ್ಯ ಕ್ರಿಯೆ ಮಾಡಿದ್ದಾರೆ. ಬಾಲಿವುಡ್​ ಕೆಲ ಸ್ಟಾರ್​ಗಳು ನಟ ಇರ್ಫಾನ್​ಗೆ ಫೋನ್​ ಕರೆ ಮಾಡುವ ಮೂಲಕ ಸಾಂತ್ವನ ಹೇಳಿದ್ದಾರೆ.

Comments are closed.