ಕರ್ನಾಟಕ

ರಾಜ್ಯದಲ್ಲಿ 26 ಮಂದಿಗೆ ಕೊರೋನಾ: 500ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು

Pinterest LinkedIn Tumblr


ಬೆಂಗಳೂರು(ಏ.25): ಕರ್ನಾಟಕದಲ್ಲಿ ಮತ್ತೆ ಕೊರೋನಾ ಆರ್ಭಟ ಮುಂದುವರಿದಿದೆ. ಇಂದು ಒಂದೇ ದಿನ 26 ಮಂದಿಗೆ ಕೊವಿಡ್-19 ಪಾಸಿಟಿವ್​​ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ. ಕೇವಲ ಬೆಂಗಳೂರಿನಲ್ಲೇ 13 ಮಂದಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 7 ಮಂದಿಗೆ ಸೋಂಕು ಪತ್ತೆಯಾಗಿದೆ. ಇದುವರೆಗೂ 18 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್​​​ ಬುಲೆಟಿನ್​​ ಪ್ರಕಾರ, ಬೆಂಗಳೂರು 13, ಬೆಳಗಾವಿ 9, ಮಂಡ್ಯ 1, ಮೈಸೂರು 1, ದಕ್ಷಿಣ ಕನ್ನಡ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಬೆಂಗಳೂರಿನ ಹೊಂಗಸಂದ್ರದ ಬಿಹಾರಿ ಮೂಲದ ಕಾರ್ಮಿಕನೊಂದಿಗೆ ಸಂಪರ್ಕದಲ್ಲಿದ್ದ ನಾಲ್ವರಿಗೆ ಸೋಕು ತಗುಲಿದೆ.

ಇನ್ನು, 500 ಕೇಸುಗಳ ಪೈಕಿ ಬೆಂಗಳೂರು ನಗರ- 133, ಮೈಸೂರು- 89, ಬೆಳಗಾವಿ- 54, ಬಾಗಲಕೋಟೆ- 24, ಬಳ್ಳಾರಿ- 13, ಬೆಂಗಳೂರು ಗ್ರಾಮಾಂತರ- 12, ಬೀದರ್​​- 15, ಚಿಕ್ಕಬಳ್ಳಾಪುರ- 18, ದಕ್ಷಿಣ ಕನ್ನಡ- 17, ಚಿತ್ರದುರ್ಗ- 1, ದಾವಣಗೆರೆ- 2, ಧಾರವಾಡ- 9, ಗದಗ- 4, ಕಲಬುರ್ಗಿ- 36, ಕೊಡಗು- 1, ಮಂಡ್ಯ- 16, ತುಮಕೂರು- 3, ಉಡುಪಿ- 3, ಉತ್ತರ ಕನ್ನಡ- 11, ವಿಜಯಪುರದಲ್ಲಿ 39 ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 59 ಮಂದಿ ಸಾವನ್ನಪ್ಪಿರುವ ಕಾರಣ ಮೃತರ ಸಂಖ್ಯೆ 779ಕ್ಕೇರಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ 25,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಇದುವರೆಗಿನ ಅಧಿಕೃತ ವರದಿ ಪ್ರಕಾರ, ಡೆಡ್ಲಿ ವೈರಸ್ ಈವರೆಗೆ ದೇಶಾದ್ಯಂತ 779 ಜನರನ್ನು ಬಲಿ ಪಡೆದಿದ್ದು, ಸೋಂಕಿತರ ಸಂಖ್ಯೆ 25,000ಕ್ಕೇರಿದೆ.

Comments are closed.