ರಾಷ್ಟ್ರೀಯ

ಐಟಿ ಕಂಪನಿ ಟಿಸಿಎಸ್​​ನಲ್ಲಿ ಶೇ.75 ನೌಕರರಿಗೆ ಮನೆಯಿಂದಲೇ ಕೆಲಸ

Pinterest LinkedIn Tumblr


ನವದೆಹಲಿ(ಏ.25): ಭಾರತದ ಅತೀದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ ಇನ್ಮುಂದೆ ಶೇ.75ರಷ್ಟು ನೌಕಕರನ್ನು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿದೆ. ಈ ಮೂಲಕ ಮುಂದಿನ ಐದು ವರ್ಷಗಳ ಕಾಲ ತನ್ನ ನೌಕರರು ಕಚೇರಿಯಲ್ಲಿ ಕೆಲಸ ಮಾಡುವ ಸಮಯ ಕಡಿಮೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಮನವಿ ಮೇರೆಗೆ ಕೊರೋನಾ ವೈರಸ್​​ನಿಂದ ಎದುರಾಗುತ್ತಿರುವ ಸವಾಲುಗಳಿಂದ ಟಿಸಿಎಸ್​​​ ಈ ನಿರ್ಧಾರ ತಾಳಿದೆ ಎನ್ನಲಾಗಿದೆ.

ಕಂಪನಿಯಲ್ಲಿ ಶೇ.100ರಷ್ಟು ಕಾರ್ಯ ಸಾಧನೆಗೆ 25 ಪರ್ಸೆಂಟ್​ಕ್ಕಿಂತ ಹೆಚ್ಚು ಉದ್ಯೋಗಿಗಳ ಅಗತ್ಯವಿಲ್ಲ. ಉದ್ಯೋಗಿಗಳು ಕಚೇರಿಯಲ್ಲಿ 25 ಪರ್ಸೆಂಟ್ ಸಮಯವನ್ನು ಕಳೆಯುವುದು ಸಾಕು. ಇಂದಿನಿಂದ ಉದ್ಯೋಗಿಗಳು ಕಚೇರಿಯಲ್ಲಿ ಇರಬೇಕಾಗಿಲ್ಲ. ಇವರು ಮನೆಯಿಂದಲೇ ಕೆಲಸ ಮಾಡಿದರೇ ಸಾಕು ಎಂದು ಟಿಸಿಎಸ್​​​ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್​ನಿಂದಲೇ ಭಾರತದ ಸುಮಾರು ನಾಲ್ಕು ಮಿಲಿಯನ್ ಐಟಿ ಉದ್ಯೋಗಿಗಳ ಪೈಕಿ ಶೇ.80 ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಜಾಗತಿಕವಾಗಿ ಗ್ರಾಹಕರಿಗೆ ಸೇವೆಗಳನ್ನು ತಲುಪಿಸುತ್ತಿದ್ದಾರೆ. ಇದು 2025ರ ವೇಳೆಗೆ 25/25 ಮಾದರಿಯನ್ನು ಪಡೆಯಬಹುದು. ಭವಿಷ್ಯದಲ್ಲಿ ನೂರರಷ್ಟು ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡುವುದಿಲ್ಲ ಎನ್ನುತ್ತಾರೆ ಮತ್ತೋರ್ವ ಟಿಸಿಎಸ್​​​ ಉನ್ನತ ಅಧಿಕಾರಿ.

ಈ ಹಿಂದೆ ನಾವು ಉದ್ಯೋಗಿಗಳಿಗೆ ಮನೆಯಿಂದ ಸೀಮಿತ ದಿನಗಳವರೆಗೆ ಮಾತ್ರ ಕೆಲಸ ಮಾಡುವ ಆಯ್ಕೆ ನೀಡಿದ್ದೆವು. ಆದರೀಗ ಕೊರೋನಾ ವೈರಸ್ ಸೋಂಕಿನ ಕಾರಣದಿಂದಾಗಿ ಶಾಶ್ವತ ವರ್ಕ್‌ ಫ್ರಮ್ ಹೋಮ್​​​ ಅವಕಾಶ ಉದ್ಯೋಗಳಿಗೆ ನೀಡಿದ್ದೇವೆ. ಸುಮಾರು 4.5 ಲಕ್ಷ ಉದ್ಯೂಗಿಗಳ ಪೈಕಿ 3.5 ಲಕ್ಷ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಟಿಸಿಎಸ್​ ತಿಳಿಸಿದೆ.

Comments are closed.