ಕರ್ನಾಟಕ

ಅಪ್ಪನಿಂದ ಕಾಲುವೆಗೆ ಎಸೆಯಲ್ಪಟ್ಟಿದ್ದ ಪುತ್ರಿ ಶವವಾಗಿ ಪತ್ತೆ

Pinterest LinkedIn Tumblr


ಬಳ್ಳಾರಿ: ತಂದೆಯಿಂದಲೇ ಎಚ್.ಎಲ್.ಸಿ ಕಾಲುವೆಗೆ ಎಸೆಯಲ್ಪಟ್ಟಿದ್ದ ಮಗಳು ಪಲ್ಲವಿ ಶವವಾಗಿ ಬುಧವಾರ ಪತ್ತೆಯಾಗಿದ್ದಾಳೆ.

ನೆರೆಯ ಆಂಧ್ರ ಪ್ರದೇಶದ ಉಂತಕಲ್ಲು ಗ್ರಾಮದ ಬಳಿಯ ಎಚ್.ಎಲ್.ಸಿ ಕಾಲುವೆಯಲ್ಲಿ ಬುಧವಾರ ಶವ ಪತ್ತೆಯಾಗಿದೆ.

ನಗರದ ಬಂಡಿಹಟ್ಟಿ ನಿವಾಸಿಯಾದ ತಂದೆ ಆಟೋ ಸುರೇಶ್ ಮತ್ತು ಮಗಳು ಪಲ್ಲವಿ (22) ನಡುವೆ ಕಳೆದ ಸೋಮವಾರ ಮನೆಯಲ್ಲಿ ಜಗಳವಾಗಿತ್ತು. ತಂದೆ ಸುರೇಶ್ ಕುಡಿಯಲು ಹಣ ನೀಡುವಂತೆ ಮಗಳನ್ನು ಪೀಡಿಸುತ್ತಿದ್ದನು. ಈ ವೇಳೆ ನನ್ನನ್ನು ಸಾಯಿಸಿಬಿಡು ಎಂದಿದ್ದ ಮಗಳನ್ನು ಕರೆದೊಯ್ದು ಕೈಕಾಲು ಕಟ್ಟಿ ಸಮೀಪದ ಎಚ್.ಎಲ್.ಸಿ ಕಾಲುವೆಗೆ ಎಸೆದಿದ್ದನು. ಸೋಮವಾರ ಇಡೀ ದಿನ ಪಲ್ಲವಿಯ ಶೋಧ ಕಾರ್ಯ ನಡೆದರೂ ಮೃತ ದೇಹ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ ನೆರೆಯ ಆಂಧ್ರದ ಉಂತ್ತಕಲ್ಲು ಗ್ರಾಮದ ಬಳಿ ಕಾಲುವೆಯಲ್ಲಿ ಪತ್ತೆಯಾಗಿದೆ.

ಮೂರು ವರ್ಷದ ಹಿಂದೆ ಪಲ್ಲವಿ ತಾಯಿ ಶಾರದಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪಾಪಿ ತಂದೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಕುರಿತು ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.