ಕರ್ನಾಟಕ

ಗದಗ ಜಿಲ್ಲೆಯಲ್ಲಿ ಮುಸ್ಲಿಂ ಯುವಕನಿಗೆ ಲಿಂಗದೀಕ್ಷೆ: ಫೆ.26ರಂದು ಪಟ್ಟಾಭಿಷೇಕ

Pinterest LinkedIn Tumblr


ರೋಣ (ಗದಗ): ಬಸವ ತತ್ವಕ್ಕೆ ಮಾರು ಹೋಗಿ ಮುಸ್ಲಿಂ ಯುವಕನೊಬ್ಬ ಸ್ವಯಂಸ್ಫೂರ್ತಿಯಿಂದ ಲಿಂಗದೀಕ್ಷೆ ಪಡೆದ ಅಪರೂಪದ ಪ್ರಸಂಗ ತಾಲೂಕಿನ ಅಸೂಟಿ ಗ್ರಾಮದ ಖಜೂರಿಮಠದಲ್ಲಿ ಶುಕ್ರವಾರ ನಡೆದಿದೆ.

ಇದೇ ಗ್ರಾಮದ ಮುಸ್ಲಿಂ ಯುವಕ ದಿವಾನ್‌ ಶರೀಫ್‌ ಎಂಬುವರಿಗೆ ಶ್ರೀಮಠದ ಮುರುಘರಾಜೇಂದ್ರ ಕೋರಣೇಶ್ವರ ಶ್ರೀಗಳು ಲಿಂಗದೀಕ್ಷೆ ನೀಡಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ನಾಂದಿ ಹಾಡಿದ್ದಾರೆ. ಶರೀಫ್‌ ಅವರನ್ನು ಶ್ರೀಮಠ ಮತ್ತು ಶಾಂತಿಧಾಮಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಫೆಬ್ರವರಿ 26ರಂದು ಪಟ್ಟಾಭಿಷೇಕ ನೆರವೇರಲಿದೆ.

ರೋಣ ಪ್ರವಾಸಿ ಪ್ರವಾಸಿ ಮಂದಿರಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭ ಖಜೂರಿಮಠದ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಜಂಗಮ ವಟುಗಳಿಗೆ ಲಿಂಗದೀಕ್ಷೆ

”ನಮ್ಮದು ಬಸವ ತತ್ವ. ನಮ್ಮಲ್ಲಿ ಎಲ್ಲ ಧರ್ಮದವರಿಗೂ ಮುಕ್ತ ಅವಕಾಶವಿದೆ. ಹೀಗಾಗಿ ನಮ್ಮ ಮಠಗಳು ಜಾತ್ಯತೀತ ಮಠಗಳಾಗಬೇಕೆಂಬ ಆಶಯದಿಂದ 12ನೇ ಶತಮಾನದ ಬಸವೇಶ್ವರರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ಸಾಗುತ್ತಾ ಬಂದಿದ್ದೇವೆ. ದಿವಾನ್‌ ಶರೀಫ್‌ರು ನಮ್ಮ ಅಸೂಟಿ ಶ್ರೀಮಠದಲ್ಲಿ ಲಿಂಗದೀಕ್ಷೆ ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ” ಎಂದು ಸ್ವಾಮೀಜಿ ಹೇಳಿದರು.

Comments are closed.