ಕರ್ನಾಟಕ

ಪೆಟ್ರೋಲ್‌, ಡೀಸೆಲ್‌ ದರಯಲ್ಲಿ ಮತ್ತಷ್ಟು ಇಳಿಕೆ

Pinterest LinkedIn Tumblr


ಬೆಂಗಳೂರು: ಪೆಟ್ರೋಲ್‌ – ಡೀಸೆಲ್‌ ದರದಲ್ಲಿ ಮತ್ತೆ ಇಳಿಕೆಯಾಗುತ್ತಿದೆ. ಬೆಂಗಳೂರಲ್ಲಿ ಸಹ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಳಿಕೆ ಕಂಡಿದೆ. ರಾಜ್ಯ ರಾಜಧಾನಿಯಲ್ಲಿ ಪೆಟ್ರೋಳ್‌ ದರ 5 ಪೈಸೆ ಕಡಿಮೆಯಾಗಿದ್ದು, 75.66 ಆಗಿದೆ.

ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲಿ ಪೆಟ್ರೋಲ್‌ ದರ 5-8 ಪೈಸೆ ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂದಿನ ಪೆಟ್ರೋಲ್‌ ದರ 73.19 ರೂ., ಚೆನ್ನೈನಲ್ಲಿ 76.03 ರೂ., ಕೋಲ್ಕತಾದಲ್ಲಿ 75.85 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 78.83 ರೂ. ಇದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ಇಳಿಕೆಯಾಗಿತ್ತಿದೆ. ಇದರ ಪರಿಣಾಮ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಇಳಿಕೆಯಾಗುತ್ತಿವೆ. ಡೀಸೆಲ್‌ ದರ ಬೆಂಗಳೂರಲ್ಲಿ ಲೀಟರ್‌ಗೆ ಕೇವಲ 2 ಪೈಸೆ ಇಳಿಕೆಯಾಗಿದ್ದು ಡೀಸೆಲ್‌ ದರ 68.46 ರೂ. ಇದೆ. ಇನ್ನು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 66.22 ರೂ., ಚೆನ್ನೈನಲ್ಲಿ 69.96 ರೂ., ಕೋಲ್ಕತಾದಲ್ಲಿ 68.59 ರೂ. ಹಾಗೂ ಮುಂಬಯಿನಲ್ಲಿ 69.42 ರೂ. ಇದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 3,677 ರೂ. ಇದೆ.

ಸೂಚನೆ: ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರಿಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸತಕ್ಕದ್ದು.

Comments are closed.