ರಾಷ್ಟ್ರೀಯ

ಅಪ್ರಾಪ್ತನ ಮಾತು ಕೇಳಿ ಗಂಡನಿಗೆ ವಿಚ್ಛೇದನ- ಮದುವೆಯಾಗು ಎಂದಾಗ ನನಗಿಂತ ಹಿರಿಯಳು ಎಂದ

Pinterest LinkedIn Tumblr


ಭೋಪಾಲ್: ವಿವಾಹಿತ ಮಹಿಳೆಗೆ ಅಪ್ರಾಪ್ತ ಹುಡುಗ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಇದೀಗ ಮಹಿಳೆ ಮೋಸ ಮಾಡಿದ ಹುಡುಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಗ್ವಾಲಿಯರ್ ನ ಮೈದೈ ಮೊಹಲ್ಲಾ ನಿವಾಸಿ ಮಹಿಳೆಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಮಹಿಳೆ ವಿವಾಹವಾಗಿ ಪತಿಯ ಜೊತೆ ಜೀವನ ಆರಂಭಿಸಿದ್ದಳು. ಒಂದು ದಿನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ತಾಯಿಯನ್ನು ನೋಡಿಕೊಳ್ಳಲು ತವರು ಮನೆ ಸೇರಿಕೊಂಡಿದ್ದಳು. ಈ ವೇಳೆ ಸ್ಥಳೀಯ ಅಪ್ರಾಪ್ತ ಹುಡುಗನ ಪರಿಚಯವಾಗಿತ್ತು. ಆ ಬಳಿಕ ಇಬ್ಬರ ಸ್ನೇಹ ಅನೈತಿಕ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.

ದಿನ ಕಳೆದಂತೆ ತನಗಿಂತ ಕಿರಿಯ ವಯಸ್ಸಿನ ಹುಡುಗನ ಜೊತೆ ಸಂಬಂಧ ಇಟ್ಟುಕೊಳ್ಳುವುದು ತಪ್ಪು ಎಂದು ಆತನಿಂದ ದೂರವಿರಲು ಮಹಿಳೆ ನಿರ್ಧರಿಸಿದ್ದಳು. ಆದರೆ ಹುಡುಗ ಮಹಿಳೆಗೆ ನಿನ್ನ ಪತಿಗೆ ವಿಚ್ಛೇದನ ಕೊಡು, ನಾನು ಮದುವೆಯಾಗುತ್ತೇನೆ ಎಂದು ಭರವಸೆ ಕೊಟ್ಟಿದ್ದಾನೆ.

ಅವನ ಮಾತುಗಳನ್ನು ನಂಬಿದ ಮಹಿಳೆ ಪತಿ ಚಿತ್ರಹಿಂಸೆ ಕೊಡುತ್ತಿದ್ದಾನೆ ಎಂದು ವಿಚ್ಛೇದನ ಕೋರಿ ನ್ಯಾಯಾಲಯದಿಂದ ಡಿವೋರ್ಸ್ ಪಡೆದಿದ್ದಳು. ಆ ಬಳಿಕ ಮಹಿಳೆ ಮತ್ತು ಹುಡುಗ ಬೇಕಾದಗೆಲ್ಲ ಲೈಂಗಿಕ ಸಂಬಂಧ ಹೊಂದುತ್ತಿದ್ದರು. ಈ ಮಧ್ಯೆ ಮಹಿಳೆ ಮದುವೆಯಾಗೋಣ ಎಂದು ಹುಡುಗನ ಬಳಿ ಕೇಳಿದ್ದಾಳೆ. ಅಂದಿನಿಂದ ಆತ ಮಹಿಳೆಯಿಂದ ದೂರ ಸರಿಯಲು ಮುಂದಾಗಿದ್ದನು.

ಅಲ್ಲದೇ ನೀನು ನನಗಿಂತ ವಯಸ್ಸಿನಲ್ಲಿ ದೊಡ್ಡವಳು ಮದುವೆಯಾಗಲು ಆಗಲ್ಲ ಎಂದಿದ್ದ. ಒಂದು ದಿನ ಆತ ನನ್ನ ಮನೆಯಲ್ಲಿ ತೋರಿಸಿದವರನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದನು. ಇದರಿಂದ ಮೋಸ ಹೋಗಿರುವುದನ್ನು ಅರಿತ ಮಹಿಳೆ ಗ್ವಾಲಿಯರ್ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Comments are closed.