ಕರ್ನಾಟಕ

ಶೈಕ್ಷಣಿಕ ಕ್ಯಾಂಪ್ ಗೆ ಬಂದಿದ್ದ ಮೂವರು ವಿದ್ಯಾರ್ಥಿಗಳು ಜಲಾಶಯದಲ್ಲಿ ನೀರುಪಾಲು

Pinterest LinkedIn Tumblr


ಕಲಬುರಗಿ: ಶೈಕ್ಷಣಿಕ ಕ್ಯಾಂಪ್ ಗೆಂದು ಬಂದಿದ್ದ ಮೂವರು ವಿದ್ಯಾರ್ಥಿಗಳು ಕಮಲಪೂರ ತಾಲೂಕಿನ ಬೆಳಕೋಟ ಜಲಾಶಯದಲ್ಲಿ ನೀರುಪಾಲದ ದುರ್ಘಟನೆ ಮಂಗಳವಾರ ನಡೆದಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಂಜುನಾಥ ಯಾದವಾಡ (15), ಶುಭಂ ಹೊಸೂರ (15) ಮತ್ತು ಲಕ್ಷ್ಮಣ ಡೋಣ್ಣೂರ (14) ಮೃತ ದುರ್ದೈವಿ ವಿದ್ಯಾರ್ಥಿಗಳು. ಇವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿಯ ಸತ್ಯಸಾಯಿ ಪ್ರೇಮನಿಕೇತನ ವಸತಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.

ಡಿ.25ರಂದು ಕಮಲಪೂರ ಸಮೀಪದ ಸತ್ಯಸಾಯಿ ವಿಶ್ವವಿದ್ಯಾಲಯಕ್ಕೆ ಶೈಕ್ಷಣಿಕ ಕ್ಯಾಂಪ್ ಗೆ ಅಂತಾ ಒಟ್ಟು 96 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರು ಬಂದಿದ್ದರು. ಇಂದು ಮಧ್ಯಾಹ್ನ 2.3ರ ಸುಮಾರಿಗೆ ಎಲ್ಲರೂ ಬೆಳಕೋಟ ಜಲಾಶಯ ನೋಡಲೆಂದು ಹೋಗಿದ್ದರು.

ಈ ಸಮಯದಲ್ಲಿ ಕೆಲ ವಿದ್ಯಾರ್ಥಿಗಳು ಈಜಲೆಂದು ಜಲಾಶಯಕ್ಕೆ ಇಳಿದಿದ್ದರು ಎನ್ನಲಾಗಿದ್ದು, ನೀರಿನಲ್ಲಿ‌ ಮುಳುಗುತ್ತಿದ್ದವರನ್ನು ಶಿಕ್ಷಕರು ಮತ್ತು ಸ್ಥಳೀಯರು ದಂಡೆ‌ಗೆ ತಂದು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ಜೀವ ಉಳಿಸಲು ಸಾಧ್ಯವಾಗಿಲ್ಲ.

ಘಟನೆ ವಿಷಯ ತಿಳಿದ ತಕ್ಷಣವೇ ಮಹಾಗಾಂವ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದರು.

Comments are closed.